Friday, November 22
Share News

ಮಂಗಳೂರು: ರೋಗಿಗೆ ಸಂಬಂಧಪಟ್ಟ ದಾಖಲೆ‌ ಹಸ್ತಾಂತರಿಸದ ಆಸ್ಪತ್ರೆಗೆ ನ್ಯಾಯಾಲಯ ದಂಡ ವಿಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ದಾಖಲೆ ಹಸ್ತಾಂತರಿಸದ ಆಸ್ಪತ್ರೆಯನ್ನು‌ಯೂನಿಟಿ ಆಸ್ಪತ್ರೆ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಒಟ್ಟು 85,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಲಾಗಿದೆ.

ಅನಾರೋಗ್ಯ ಪೀಡಿತರಾಗಿ ಮಂಗಳೂರಿನ ಫಳ್ನೀರ್ ಬಳಿ ಇರುವ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ರಾಹಿಂ ಯು.ಎಚ್ ರವರ ವೈದ್ಯಕೀಯ ದಾಖಲೆಗಳನ್ನು ನೀಡದ ಕಾರಣ ಮಂಗಳೂರಿನ ವಕೀಲರಾದ ಪಿ.ಬಿ ಭಟ್ ರವರು ಗ್ರಾಹಕರ ಆಯೋಗದ ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ದೂರು ದಾಖಲಿಸಿ, ಯುನಿಟಿ ಅಸ್ಪತ್ರೆಯವರು ರೋಗಿಗೆ ಸಂಬಂಧ ಪಟ್ಟ ದಾಖಲೆ ಪತ್ರಗಳನ್ನು ತಕ್ಕ ಸಮಯಕ್ಕೆ ನೀಡದಿರುವ ಬಗ್ಗೆ ವಾದ ಮಂಡಿಸಿದ್ದರು. ಇದೀಗ ಗ್ರಾಹಕರ ನ್ಯಾಯಾಲಯವು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಂಡ ವಿಧಿಸಿದೆ

ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ U/s.35 ರಂತೆ ದೂರುದಾರರು ಸಲ್ಲಿಸಿದ ದೂರಿನ ಅನ್ವಯ ಶ್ರೀ ಅಬ್ದುಲ್ ಖಾದರ್ ಹಾಫಿಜ್ V/s. ಯೂನಿಟಿ ಕೇರ್ & ಹೆಲ್ತ್ ಸರ್ವೀಸಸ್ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ವಿರುದ್ದ ದೂರು ಸಂಖ್ಯೆ: 03/2024 ರಂತೆ ದೂರುದಾರರಿಗೆ ಸೇವಾ ನ್ಯೂನತೆ, ಮಾನಸಿಕ ಸಂಕಟ ಮತ್ತು ಅನಾನುಕೂಲತೆಗಾಗಿ ರೂಪಾಯಿ 50 ಸಾವಿರ ಮಂಡಿಸಿದ್ದರು. ಇದೀಗ ಗ್ರಾಹಕರ ನ್ಯಾಯಾಲಯವು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಒಟ್ಟು 85,000 ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ U/s.35 ರಂತೆ ದೂರುದಾರರು ಸಲ್ಲಿಸಿದ ದೂರಿನ ಅನ್ವಯ ಶ್ರೀ ಅಬ್ದುಲ್ ಖಾದರ್ ಹಾಫಿಜ್ V/s. ಯೂನಿಟಿ ಕೇರ್ & ಹೆಲ್ತ್ ಸರ್ವೀಸಸ್ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ವಿರುದ್ದ ದೂರು ಸಂಖ್ಯೆ: 03/2024 ರಂತೆ ದೂರುದಾರರಿಗೆ ಸೇವಾ ನ್ಯೂನತೆ, ಮಾನಸಿಕ ಸಂಕಟ ಮತ್ತು ಅನಾನುಕೂಲತೆಗಾಗಿ ರೂಪಾಯಿ 50 ಸಾವಿರ ಪರಿಹಾರ, ಭಾರತೀಯ ವೈದ್ಯಕೀಯ ಮಂಡಳಿ 2002 ರ ನಿಯಮಾವಳಿಗಳನ್ನು ಅನುಸರಿಸದಿದ್ದಕ್ಕಾಗಿ, ಅಂದರೆ ವೈದ್ಯಕೀಯ ದಾಖಲೆಗಳನ್ನು ಒದಗಿಸಲು ವಿಫಲವಾದ ಕಾರಣ ರೂ.25,000 ದಂಡವನ್ನು ಪಾವತಿಸಲು ನಿರ್ದೇಶಿಸಿದೆ. ದೂರುದಾರರಿಗೆ ದಾವೆಯ ವೆಚ್ಚವಾಗಿ ರೂ.10 ಸಾವಿರ, ಒಟ್ಟು 85 ಸಾವಿರ ರೂಪಾಯಿ ಮೊತ್ತವನ್ನು ದೂರುದಾರರಿಗೆ ನೀಡಲು ವೈದ್ಯಕೀಯ ದಾಖಲೆಗಳನ್ನು ಒದಗಿಸಲು ವಿಫಲವಾದ

ನ್ಯಾಯಾಲಯವು ನೀಡಿರುವ ಆದೇಶದ ದಿನಾಂಕದಿಂದ 45 ದಿನಗಳಲ್ಲಿ ಮೇಲಿನ ಮೊತ್ತವನ್ನು ಪ್ರತಿವಾದಿದಾರರು ಪಾವತಿಸಲು ಹೊಣೆಗಾರರಾಗಿರುತ್ತಾರೆ. ವಿಫಲವಾದರೆ ಮೇಲಿನ ಮೊತ್ತವು ಸೇರಿ ಶೇಕಡಾ 6 ರ ಬಡ್ಡಿಯನ್ನು ಸೇರಿಸಿ ದೂರದಾರರಿಗೆ ಪಾವತಿಸಬೇಕಾಗುತ್ತದೆ. ಮೇಲಿನ ಆದೇಶವನ್ನು ಪಾಲಿಸಲು ವಿಫಲವಾದರೆ ಪ್ರತಿವಾದಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೂರುದಾರರ ಪರವಾಗಿ ಮಂಗಳೂರಿನ ವಕೀಲರಾದ ಪಿ.ಬಿ ಭಟ್ ವಾದಿಸಿದ್ದರು. ಅನಾರೋಗ್ಯ ಪೀಡಿತ ಇಬ್ರಾಹಿಂ ಯು.ಎಚ್ ರವರ ಮಗ ಅಬ್ದುಲ್ ಖಾದ‌ರ್ ಹಫೀಝ್ ರವರು ಮೊಕದ್ದಮೆ ದಾಖಲಿಸಿ, ಕಾನೂನು ಹೋರಾಟ ನಡೆಸಲು ಮಹಮ್ಮದ್ ಝಮೀರ್ ರವರಿಗೆ ಅಧಿಕಾರ ಪತ್ರ (GPA) ನೀಡಿದ್ದರು.

 


Share News

Comments are closed.

Exit mobile version