ಸಿನೇಮಾ

ಮಗನ ಪರಿಚಯಿಸಿದ ಡ್ಯಾನ್ಸ್ ಕಿಂಗ್ ಪ್ರಭುದೇವ್! ಡ್ಯಾನ್ಸ್ ಫ್ಯಾಮಿಲಿಯ ಮತ್ತೊಂದು ಕುಡಿ, ಕೊರಿಯೋಗ್ರಾಫಿ ಫಿಲ್ಡಿಗೆ!

ನಟ, ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಅವರು ತಮ್ಮ ಮಗ ರಿಷಿಯನ್ನು ಪರಿಚಯಿಸಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ನಟ, ಕೊರಿಯೋಗ್ರಾಫರ್, ನಿರ್ದೇಶಕ ಪ್ರಭುದೇವ ಅವರು ತಮ್ಮ ಮಗ ರಿಷಿಯನ್ನು ಪರಿಚಯಿಸಿದ್ದಾರೆ. ಈ ವಿಡಿಯೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ರಿಷಿ ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ.

akshaya college

ಇತ್ತೀಚೆಗೆ ಪ್ರಭುದೇವ ಅವರು ಚೆನ್ನೈನಲ್ಲಿ ಡ್ಯಾನ್ಸ್​ ಕಾನ್ಸರ್ಟ್ ನಡೆಸಿದ್ದಾರೆ. ಈ ವೇದಿಕೆ ಮೇಲೆ ಮಗನ ಪರಿಚಯಿಸಿದ್ದಾರೆ. ತಂದೆಯ ರೀತಿಯೇ ರಿಷಿ ದೇವ ಕೂಡ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಪ್ರಭುದೇವ ಅವರಿಗೆ ಮಗನ ಬಗ್ಗೆ ಹೆಮ್ಮೆ ಇದೆ. ತಂದೆಯಂತೆ ಸ್ಟೆಪ್​ಗಳನ್ನು ಕಲಿತು ರಿಷಿ ಡ್ಯಾನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆ.

‘ನನ್ನ ಮಗ ರಿಷಿ ದೇವನ ಪರಿಚಯಿಸಲು ಹೆಮ್ಮೆ ಆಗುತ್ತಿದೆ. ಅವನನ್ನು ಮೊದಲ ಬಾರಿಗೆ ನಿಮಗೆ ಪರಿಚಯಿಸುತ್ತಿದ್ದೇವೆ. ಇದು ಕೇವಲ ಡ್ಯಾನ್ಸ್ ಅಲ್ಲ, ಲೆಗಸಿ, ಪ್ಯಾಷನ್. ಪ್ರಯಾಣ ಈಗಷ್ಟೇ ಆರಂಭ ಆಗುತ್ತಿದೆ’ ಎಂದು ಮಗ ಡ್ಯಾನ್ಸ್ ಮಾಡುವ ವಿಡಿಯೋಗೆ ಪ್ರಭುದೇವ ಕ್ಯಾಪ್ಶನ್ ನೀಡಿದ್ದಾರೆ. ಈ ವಿಡಿಯೋನ ಅನೇಕರು ಶೇರ್ ಮಾಡಿಕೊಂಡಿದ್ದಾರೆ.

ಪ್ರಭುದೇವ ಅವರ ತಂದೆ ಸುಂದರಮ್ ಮಾಸ್ಟರ್ ಅವರ ಪರಿಚಯದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದರು. ನಿವೃತ್ತಿ ಪಡೆದ ಬಳಿಕವೂ ಅನೇಕ ರಿಯಾಲಿಟಿ ಶೋಗೆ ಜಡ್ಜ್​ ಆಗಿ ಕೆಲಸ ಮಾಡಿದ್ದರು. ಅವರು ಸಾವಿರಕ್ಕೂ ಅಧಿಕ ಸಿನಿಮಾಗಳ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಪ್ರಭುದೇವ ಅವರ ಸಹೋದರ ರಾಜು ಸುಂದರಂ ಅವರು ನ್ಯಾಷನಲ್ ಅವಾರ್ಡ್​ ವಿನ್ನಿಂಗ್ ಕೊರಿಯೋಗ್ರಾಫರ್. ಪ್ರಭುದೇವ ಅವರ ಸಹೋದರ ನಾಗೇಂದ್ರ ಪ್ರಸಾದ್ ಕೂಡ ಡ್ಯಾನ್ಸರ್.

ಈಗ ಈ ಕುಟುಂಬದ ಮತ್ತೊಬ್ಬರು ಡ್ಯಾನ್ಸ್​​ನ ನಂಬಿ ಬರುತ್ತಿದ್ದಾರೆ. ಪ್ರಭುದೇವ ಹಾಗೂ ರಮಲತಾ ಈ ಮೊದಲು ವಿವಾಹ ಆಗಿದ್ದರು. ಈ ದಂಪತಿಗೆ ಜನಿಸಿದ್ದು ರಿಷಿ. ಈಗ ರಮಲತಾ ಹಾಗೂ ಪ್ರಭುದೇವ ಬೇರೆ ಆಗಿದ್ದಾರೆ. ಡಿವೋರ್ಸ್ ಪಡೆದು ದೂರ ಆಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…