Friday, November 22
Share News

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಖ್ಯಾತ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬಾಂಬ್ ಸ್ಫೋಟ ಸಂದರ್ಭದಲ್ಲಿ ಓರ್ವ ತಾಯಿ ಮಾಡಿದ ಒಂದು ದೂರವಾಣಿ ಕರೆ ಆತನ ಪ್ರಾಣ ಉಳಿಸಿದೆ.

ಶುಕ್ರವಾರ ಮಧ್ಯಾಹ್ನ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆ ಹೋಗಿದ್ದ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ಗೆ ಅವರ ತಾಯಿಯ ಮಾಡಿದ್ದ ವಾಡಿಕೆಯ ಫೋನ್ ಕರೆ ಆತನ ಜೀವ ಉಳಿಸಿದೆ. ಬಿಹಾರದ ಪಾಟ್ನಾ ಮೂಲದ 24 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್‌ ಕುಮಾರ್ ಅಲಂಕೃತ್ ಎಂದಿನಂತೆ ರಾಮೇಶ್ವರಂ ಕೆಫೆಗೆ ಊಟಕ್ಕೆಂದು ಬಂದು ದೋಸೆ ತೆಗೆದುಕೊಂಡು ಇನ್ನೇನು ತಿನ್ನನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಆತನ ಮೊಬೈಲ್ ಗೆ ತಾಯಿ ಕರೆ ಮಾಡಿದ್ದಾರೆ. ಹೀಗಾಗಿ ಆಲಂಕೃತ್ ಅಮ್ಮನೊಂದಿಗೆ ಮಾತನಾಡಲು ಶಾಂತವಾದ ಸ್ಥಳ ಹುಡುಕಿ ಅಲ್ಲಿಂದ ಸುಮಾರು 10 ಮೀಟರ್ ದೂರದಲ್ಲಿದ್ದ ಪ್ರದೇಶಕ್ಕೆ ದೋಸೆ ತೆಗೆದುಕೊಂಡು ಹೋಗಿದ್ದಾರೆ.

ಅಲಂಕೃತ್ ದೋಸೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಇತ್ತ ಅವರು ಕುಳಿತ ಊಟ ಮಾಡಬೇಕೆಂದುಕೊಂಡಿದ್ದ ಜಾಗದಲ್ಲೇ ಸ್ಫೋಟ ಸಂಭವಿಸಿದೆ. ಇವಿಷ್ಟೂ ಘಟನೆಯನ್ನು ಅಲಂಕೃತ್ ತಮ್ಮ ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಿಕೊಂಡಿದ್ದು, ತಮಗಾದ ಕರಾಳ ಅನುಭವವನ್ನು ಮತ್ತು ತನ್ನ ಜೀವ ಉಳಿಸಿದ ತಾಯಿ ಕರೆಯನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಅಮ್ಮನೇ ದೇವರು ಎಂದು ಬರೆದುಕೊಂಡಿದ್ದಾರೆ. ನಿಜ ಆ ಒಂದು ಕರೆ ಬಾರದೇ ಹೋಗಿದ್ದರೆ ಇಂದು ಹೇಗೆ ಬದುಕುಳಿದೆ ಎಂದು ಸುದ್ದಿಯಾಗಿರುವ ಅಲಂಕೃತ್, ಬೇರೆಯೇ ರೀತಿಯಲ್ಲಿ ಸುದ್ದಿಯಾಗಿರುತ್ತಿದ್ದರು.

ಇಷ್ಟಕ್ಕೂ ಸ್ಥಳದಲ್ಲೇನಾಗಿತ್ತು?

ಅಲಂಕೃತ್ ಟ್ವಿಟರ್ ನವ್ವಿ ಬರೆದುಕೊಂಡಂತೆ, “ನಾನು ಪಿಕ್ ಅಪ್ ಕೌಂಟರ್‌ನಿಂದ ದೋಸೆಯನ್ನು ಹಿಡಿದು ಕೆಫೆಯೊಳಗಿನ ಕುಳಿತುಕೊಳ್ಳಲು ಹೊರಟಿದ್ದೆ. ನಾನು ಕೆಫೆಗೆ ಭೇಟಿ ನೀಡಿದಾಗಲೆಲ್ಲಾ ನಾನು ಇದೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಿದ್ದೆ (ನಂತರ ಅಲ್ಲಿ ಸ್ಫೋಟ ಸಂಭವಿಸಿದೆ) ಅದು ನನ್ನ ನೆಚ್ಚಿನ ಜಾಗವಾಗಿತ್ತು. ಈ ಬಾರಿಯೂ ಸಹ ನಾನು ಅಲ್ಲಿ ಕುಳಿತುಕೊಳ್ಳಲು ಯೋಜಿಸುತ್ತಿದ್ದೆ. ಅಗ ನನಗೆ ನನ್ನ ತಾಯಿಯಿಂದ ಫೋನ್ ಕರೆ ಬಂದಿತು, ಆದ್ದರಿಂದ ನಾನು ಕೆಫೆಯ ಹೊರಗೆ ಕೆಲವು ಮೀಟರ್ ದೂರದ ಶಾಂತ ಪ್ರದೇಶಕ್ಕೆ ಹೋಗಲು ನಿರ್ಧರಿಸಿದೆ. ಹಾಗಾಗಿ ನಾನು ಅವಳೊಂದಿಗೆ ಮಾತನಾಡಬಹುದು ಎಂದು ಸುಮಾರು 10 ಮೀಟರ್ ದೂರ ಹೋದೆ ಎಂದು ಅವರು ಹೇಳಿದರು.

ಇದು ವಾಡಿಕೆಯ ಫೋನ್ ಕರೆ ಎಂದು ವಿವರಿಸಿದ ಅವರು, “ನನ್ನ ತಾಯಿ ನಾನು ಎಲ್ಲಿದ್ದೇನೆ ಮತ್ತು ಹೇಗಿದ್ದೇನೆ? ಏನು ಮಾಡುತ್ತಿದ್ದೇನೆ ಮತ್ತು ವಸ್ತುಗಳ ಬಗ್ಗೆ ಕೇಳುತ್ತಿದ್ದಳು? ಈ ವೇಳೆ ಇದ್ದಕ್ಕಿದ್ದಂತೆ, ನಾನು ಈ ದೊಡ್ಡ ಶಬ್ದವನ್ನು ಕೇಳಿದೆ, ನಾನು ಹೊರಗೆ ಇದ್ದೆ, ಅದು ದೊಡ್ಡ ಸ್ಫೋಟವಾಗಿತ್ತು. ಎಲ್ಲರೂ ಭಯಭೀತರಾಗಿ ಹೊರಗೆ ಓಡಿಹೋದರು. ಎಲ್ಲೆಂದರಲ್ಲಿ ಹೊಗೆ ಆವರಿಸಿತು ಮತ್ತು ಸ್ಥಳದಿಂದ ದುರ್ವಾಸನೆ ಬರಲಾರಂಭಿಸಿತು. ಕೆಲವರಿಗೆ ಸುಟ್ಟ ಗಾಯಗಳಾಗಿದ್ದರೆ, ಕೆಲವರ ಕಿವಿ ಮತ್ತು ತಲೆಯಿಂದ ರಕ್ತಸ್ರಾವವಾಗುತ್ತಿತ್ತು ಎಂದು ಅಲಂಕೃತ್ ಹೇಳಿದರು.

“ಇದು ಇದ್ದಕ್ಕಿದ್ದಂತೆ ಸಂಭವಿಸಿತು. ಆ ದೊಡ್ಡ ಸ್ಫೋಟ ಮತ್ತು ಏನಾಗುತ್ತಿದೆ ಎಂದು ತಿಳಿಯದೆ ಜನರು ಓಡಿಹೋದರು. ಇದು ಭಯಾನಕ ಮತ್ತು ಆಘಾತಕಾರಿಯಾಗಿತ್ತು. ಆದರೆ ಅದೃಷ್ಟವಶಾತ್, ನನ್ನ ತಾಯಿಯಿಂದ ಬಂದ ಆ ಫೋನ್ ಕರೆ ನನ್ನ ಜೀವ ಉಳಿಸಿತು. ಅಮ್ಮನ ಕರೆ ಬರದೇ ಹೋಗಿದಿದ್ದರೆ, ಎಂದಿನಂತೆ ನಾನು ನನ್ನ ನೆಚ್ಚಿನ ಸ್ಥಳದಲ್ಲಿ ಕುಳಿತುಕೊಂಡು ಊಟ ಮಾಡುತ್ತಿದ್ದೆ. ಒಂದು ವೇಳೆ ನಾನು ಅಲ್ಲಿಯೇ ಇದ್ದಿದ್ದರೆ… ಎಂದು ಅವರು ವಿವರಿಸಿದ್ದಾರೆ.


Share News

Comments are closed.

Exit mobile version