ಹೊಸದಿಲ್ಲಿ: ನ.17ರಿಂದ ಅನ್ವಯವಾಗುವಂತೆ ಏರ್ ಇಂಡಿಯಾ ವಿಮಾನಗಳಲ್ಲಿ ಹಲಾಲ್ ಪ್ರಮಾಣೀಕೃತ ಮಾಂಸಾಹಾರಿ ಖಾದ್ಯಗಳನ್ನು ಹಿಂದೂ ಮತ್ತು ಸಿಕ್ಸ್ ಸಮುದಾಯದವರಿಗೆ ಪೂರೈಸಲಾಗುವುದಿಲ್ಲ. ಇಂಥ ಆಹಾರ ಬೇಕಿದ್ದರೆ ಟಿಕೆಟ್ ಕಾಯ್ದಿರಿಸುವ ವೇಳೆ “ಮುಸ್ಲಿಂ ಮೀಲ್’ ಎಂದು ನಮೂದಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.
ಸೌದಿ ರಾಷ್ಟ್ರದ ವಲಯಗಳಲ್ಲಿ ಮತ್ತು ಹಜ್ ವಿಮಾನಗಳಲ್ಲಿ ಹಲಾಲ್ ಪ್ರಮಾಣೀಕೃತ ಖಾದ್ಯಗಳನ್ನು ನೀಡಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಕಳೆದ 10 ವರ್ಷಗಳಿಂದ ವಿಮಾನಯಾನ ಸಂಸ್ಥೆಗಳಲ್ಲಿ ಹಲಾಲ್ ಆಹಾರ ವಿತರಣೆಯನ್ನು ಅನೇಕ ಹಿಂದೂ ಮತ್ತು ಸಿಕ್ಸ್ ಸಂಘಟನೆಗಳು ಸತತವಾಗಿ ಪ್ರಶ್ನಿಸುತ್ತಿದ್ದವು