Gl harusha
ಪ್ರಚಲಿತಸ್ಥಳೀಯ

ಪುತ್ತೂರು: ಕೆಟ್ಟು ನಿಂತ ರೈಲು – ಪ್ರಯಾಣಿಕರು ಕಂಗಾಲು!!

ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಪುತ್ತೂರಿನಲ್ಲಿ ಕೆಟ್ಟು ನಿಂತ ಘಟನೆ ಭಾನುವಾರ ಸರಿ ರಾತ್ರಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಂಗಳೂರಿನಿಂದ ಬೆಂಗಳೂರಿಗೆ ಹೊರಟಿದ್ದ ರೈಲು ಪುತ್ತೂರಿನಲ್ಲಿ ಕೆಟ್ಟು ನಿಂತ ಘಟನೆ ಭಾನುವಾರ ಸರಿ ರಾತ್ರಿ ನಡೆದಿದೆ.

Muliya
srk ladders
Pashupathi

ಮಂಗಳೂರಿನಿಂದ ಹೊರಟಿದ್ದ ಕಣ್ಣೂರು ಎಕ್ಸ್’ಪ್ರೆಸ್’ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮ ಪ್ರಯಾಣಿಕರು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.

ರಾತ್ರಿ 9.30ಕ್ಕೆ ಕಣ್ಣೂರು ಎಕ್ಸ್’ಪ್ರೆಸ್ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಆಗಮಿಸಿತ್ತು. ಬೆಳಿಗ್ಗೆ 6ರ ಸುಮಾರಿಗೆ ಬೆಂಗಳೂರಿಗೆ ತಲುಪಬೇಕಿತ್ತು, ಆದರೆ ವಿಳಂಬವಾಗುವ ಸಾಧ್ಯತೆ ಇದೆ.

ಪುತ್ತೂರಿನಿಂದ ಸುಮಾರು 1.ಕಿ.ಮೀ ಮುಂದೆ ಸಾಗಿದ ರೈಲು ಅಚಾನಕಾಗಿ ನಿಂತಿದೆ. ಸುಮಾರು 1 ಘಂಟೆಗಳ ಕಾಲ ಕೆಟ್ಟು ನಿಂತ ಬಳಿಕ ಪ್ರಯಾಣಿಕರಿಗೆ ಸಮಸ್ಯೆಯ ಬಗ್ಗೆ ತಿಳಿದು ಬಂದಿದೆ.

ಸುಬ್ರಹ್ಮಣ್ಯದಿಂದ ರೈಲು ಇಂಜಿನ್ ತರಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts