All News

ಹಿರಿಯರ ಸೇವಾ ಪ್ರತಿಷ್ಠಾನ ಪುತ್ತೂರು ಘಟಕದ ವಾರ್ಷಿಕ ಸಭೆ

ಹಿರಿಯರು ಮಾಡುವ ಸೇವಾ ಕಾರ್ಯಗಳು ಅತ್ಯಂತ ಮೌಲ್ಯಯುತವಾಗಿದ್ದು ಉಳಿದವರಿಗೆ ಪ್ರೇರಣೆಯನ್ನು ನೀಡುತ್ತದೆ. ಸೇವಾ ಮನೋಭಾವ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪುತ್ತೂರು ಘಟಕದ ಸದಸ್ಯರು ಉಳಿದ ಘಟಕಗಳಿಗೆ ಮಾದರಿಯಾಗಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ( ರಿ )ಮೆಲ್ಕಾರ್ ಬಂಟ್ವಾಳ ಇದರ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು

ಈ ಸುದ್ದಿಯನ್ನು ಶೇರ್ ಮಾಡಿ

ಹಿರಿಯರು ಮಾಡುವ ಸೇವಾ ಕಾರ್ಯಗಳು ಅತ್ಯಂತ ಮೌಲ್ಯಯುತವಾಗಿದ್ದು ಉಳಿದವರಿಗೆ ಪ್ರೇರಣೆಯನ್ನು ನೀಡುತ್ತದೆ. ಸೇವಾ ಮನೋಭಾವ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪುತ್ತೂರು ಘಟಕದ ಸದಸ್ಯರು ಉಳಿದ ಘಟಕಗಳಿಗೆ ಮಾದರಿಯಾಗಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ( ರಿ )ಮೆಲ್ಕಾರ್ ಬಂಟ್ವಾಳ ಇದರ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ತಿಳಿಸಿದರು.

ಪುತ್ತೂರಿನ ಸ್ವಾಗತ ಹೋಟೆಲ್ ನಲ್ಲಿ ಜರಗಿದ ಪ್ರತಿಷ್ಠಾನದ ಪುತ್ತೂರು ಘಟಕದ  ವಾರ್ಷಿಕ  ಸಭೆಯಲ್ಲಿ ಮಾತನಾಡಿದರು.

SRK Ladders

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಉಪಾಧ್ಯಕ್ಷರಾದ ಲೋಕೇಶ್ ಹೆಗ್ಡೆ ಪುತ್ತೂರು, ಸಹ ಕಾರ್ಯದರ್ಶಿ ಡಾ. ಬಿ. ಎನ್ ಮಹಾಲಿಂಗ ಭಟ್, ಖಜಾಂಚಿ ಬಾಲಕೃಷ್ಣರಾವ್ ಅನಾರು, ಸಹ ಸಂಚಾಲಕ ಭಾಸ್ಕರ ಬಾರ್ಯ, ರಾಮಕೃಷ್ಣ ನಾಯಕ್ ಕೋಕಳ  ಉಪಸ್ಥಿತರಿದ್ದರು.

ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪದ್ಮಯ್ಯ ಎಚ್, ಅಧ್ಯಕ್ಷರಾಗಿ ಚಂದ್ರಶೇಖರ ಆಳ್ವ ಪಡುಮಲೆ, ಸಂಚಾಲಕರಾಗಿ ಭವಾನಿ ಶಂಕರ ಶೆಟ್ಟಿ, ಪುತ್ತೂರು, ಉಪಾಧ್ಯಕ್ಷರಾಗಿ ಈಶ್ವರ ಭಟ್ ಗುಂಡ್ಯಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ರಾವ್ ಅನಾರು, ಮಹಿಳಾ ಪ್ರತಿನಿಧಿಯಾಗಿ ಶ್ರೀಮತಿ ಪ್ರೇಮಲತಾ ರಾವ್ ಪುತ್ತೂರು ಮತ್ತು ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಇತ್ತೀಚೆಗೆ ನಿಧನರಾದ ತೆಂಕುತಿಟ್ಟಿನ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

 ಎಡನೀರು ಮಠದ  ಶ್ರೀಗಳು ಸಂಚರಿಸುತ್ತಿದ್ದ ವಾಹನದ ಮೇಲೆ ಬೋವಿಕ್ಕಾನದ ಬಳಿ  ದುಷ್ಕರ್ಮಿಗಳಿಂದ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಲಾಯಿತು.

 ಚಂದ್ರಶೇಖರ ಆಳ್ವ ಪಡುಮಲೆ ಸ್ವಾಗತಿಸಿದರು. ಭಾಸ್ಕರ ಬಾರ್ಯ ಪುತ್ತೂರು ಘಟಕದ ವಾರ್ಷಿಕ ಚಟುವಟಿಕೆಗಳ ಮಾಹಿತಿ ನೀಡಿದರು. ಪದ್ಮಯ. ಎಚ್ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts