All Newsರಾಜ್ಯ ವಾರ್ತೆಸ್ಥಳೀಯ

ಕಾಲ್ನಡಿಗೆಯಲ್ಲಿ ಅಯೋಧ್ಯೆಯಿಂದ ಶಬರಿಮಲೆಗೆ ಹೊರಟಿದ್ದ ವ್ಯಕ್ತಿಯ ದುರ್ಮರಣ! 25ನೇ ವರ್ಷದ ಶಬರಿಮಲೆ ದರ್ಶನ ವೇಳೆ ಭಕ್ತನ ಅಂತ್ಯಯಾತ್ರೆ?!

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡಿನಿಂದ ಹೊರಟು ದೇಶ ವ್ಯಾಪಕ ಹಿಂದೂ ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನೆಲ್ಲಾ ಕಾಲ್ನಡಿಗೆಯಲ್ಲೇ ಪರ್ಯಟನೆಗೈದು ದೇಶದ ಜನ ಗಮನ ಸೆಳೆದ ಕಾಸರಗೋಡು ಕೂಡ್ಲುವಿನ ಸ್ನೇಹಿತರಿಬ್ಬರ ಪೈಕಿ ಓರ್ವ ಕಾಲ್ನಡಿಗೆಯ ಪಯಣ ಮಧ್ಯೆ ಮೃತಪಟ್ಟ  ವರದಿಯಾಗಿದೆ.

ಅಯೋಧ್ಯೆಯಿಂದ ಶ್ರೀ ಶಬರಿಮಲೆ ಗುರಿಯಾಗಿಸಿ ನಡೆಯುವ ಮಧ್ಯೆ ಭೋಪಾಲದಲ್ಲಿ ಹೃದಯಾಘಾತ ಸಂಭವಿಸಿ ಕೂಡ್ಲು ನಿವಾಸಿ ಶಿವಪ್ರಕಾಶ್ (45)ಮೃತಪಟ್ಟರು.

SRK Ladders

ಅಯೋಧ್ಯೆಯಿಂದ ಹೊರಟು ಮಧ್ಯಪ್ರದೇಶದ ಸಿಯೋನಿ ತಲುಪಿದಾಗ ಎದೆ ನೋವು ಕಾಣಿಸಿಕೊಂಡವರನ್ನು ಕೂಡಲೇ ಸಿಯೋನಿ ನಗರದ ಆಸ್ಪತ್ರೆಗೆ ಸ್ಥಳೀಯ ಹಿಂದೂ ದೇವಾಲಯಗಳ ಕಾರ್ಯಕರ್ತರ ಸಹಕಾರದಿಂದ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಮರಣಸಂಭವಿಸಿತ್ತು.

ಕಳೆದ 24ವರ್ಷಗಳಿಂದ ನಿರಂತರ ಶಬರಿಮಲೆ ಸನ್ನಿಧಾನಕ್ಕೆ ವರ್ಷಂಪ್ರತಿ ವ್ರತ ನಿಷ್ಠೆಯಿಂದ ದರ್ಶನ ನೀಡುತ್ತಿದ್ದ ಇವರು ಇದೇ ಮೊದಲ ಬಾರಿಗೆ ದೇಶದ ಪುಣ್ಯ ಕ್ಷೇತ್ರ ದರ್ಶನಗೈದು ಶಬರಿಮಲೆಗೆ ಬರುವಂತೆ ದೇಶ ಪರ್ಯಟನೆ ಹೊರಟಿದ್ದರು. ಕಾಸರಗೋಡಿನ ಗೆಳೆಯರಿಬ್ಬರು ಕಾಲ್ನಡಿಗೆಯಲ್ಲಿ ಕಾಶ್ಮೀರ ಸಹಿತ ದೇಶದ ಪುಣ್ಯ ಕ್ಷೇತ್ರ ಸಂದರ್ಶಿಸಿ ಶಬರಿಮಲೆ ಮೂಲಕ ತಾಯ್ನಾಡಿಗೆ ಮರಳುವುದು ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಶೇಷ ಸುದ್ದಿಯಾಗಿತ್ತು.

ಕೂಡ್ಲಿನ ದಿ. ಅಪ್ಪು -ಶ್ರೀ ದೇವಿ ದಂಪತಿ ಎಂಬವರ ಮಗನಾದ ಶಿವಪ್ರಕಾಶ್ ಕ್ಯಾಟರಿಂಗ್ ವೃತ್ತಿಯವರಾಗಿದ್ದರು. ಮೃತರು ಪತ್ನಿ ಸರಸ್ವತಿ , ಮತ್ತು ಇಬ್ಬರು ಪುತ್ರರನ್ನು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವ್ರತ ನಿಷ್ಠೆಯ ಪುಣ್ಯ ಕ್ಷೇತ್ರ ದರ್ಶನದ ನಡುವಣ ಈ ವಿಯೋಗ ಕೂಡ್ಲು ಪರಿಸರದಲ್ಲಿ ದುಖಃದ ವಾತಾವರಣ ಮೂಡಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4