All News

ಕೋತಿ ಓಡಿಸಿದ ಮಹಿಳೆ, ರಿವೆಂಜ್ ತೀರಿಸಿದ ಮಂಗ!!

ಕಾಡಾನೆ, ಚಿರತೆಗಳಿಂದ ಕಂಗೆಟ್ಟ ಕಾಸರಗೋಡಿನ ಮುಳಿಯಾರು ಪರಿಸರದಲ್ಲೀಗ ಮಂಗನ ಹಾವಳಿಯೂ ಅತಿಯಾಗಿದೆ‌ . ಮನೆಯಂಗಳದ ತೆಂಗಿನಮರವೇರಿದ ಮಂಗಗಳು ಎಳನೀರು ಕುಡಿಯುವುದನ್ನು ಕಂಡ ಗೃಹಿಣಿ, ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಕಾಡಾನೆ, ಚಿರತೆಗಳಿಂದ ಕಂಗೆಟ್ಟ ಕಾಸರಗೋಡಿನ ಮುಳಿಯಾರು ಪರಿಸರದಲ್ಲೀಗ ಮಂಗನ ಹಾವಳಿಯೂ ಅತಿಯಾಗಿದೆ‌ . ಮನೆಯಂಗಳದ ತೆಂಗಿನಮರವೇರಿದ ಮಂಗಗಳು ಎಳನೀರು ಕುಡಿಯುವುದನ್ನು ಕಂಡ ಗೃಹಿಣಿ, ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು. ಈ ವೇಳೆ ಕೈಯ್ಯಲ್ಲಿದ್ದ ಎಳನೀರನ್ನು ಮಹಿಳೆಯತ್ತ ಮಂಗವೊಂದು ಎಸೆದಿದ್ದು, ಅದು ತಾಗಿ ಮಹಿಳೆಯ ಕೈಯ್ಯ ಮೂಳೆ ಮುರಿಯಿತು.

ಮುಳಿಯಾರು ಬಾವಿಕೆರೆಯ ಕೊಳತ್ತೂರಿನ ಕೃಷ್ಣನ್ ನಾಯ‌ರ್ ಎಂಬವರ ಪತ್ನಿ ಸಾವಿತ್ರಿ ಗಾಯಾಳಾಗಿದ್ದು, ಕಾಸರಗೋಡಿನ ಚೆಂಗಳ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SRK Ladders

ಈ ಪ್ರದೇಶಗಳಲ್ಲಿ ಕಳೆದ ಕೆಲವು ಸಮಯಗಳಿಂದ ವನ್ಯಮೃಗ ಉಪಟಳ ವಿಪರೀತವಾಗಿದೆ. ಒಂದೆಡೆ ಪದೇ, ಪದೇ ಕಾಡಾನೆಗಳು ನಾಡಲ್ಲಿ ಕೃಷಿನಾಶಗೈದು, ಭಯಮೂಡಿಸಿದರೆ ಮತ್ತೊಂದೆಡೆ ಪದೇ, ಪದೇ ಕಾಣಿಸಿಕೊಳ್ಳುವ ಚಿರತೆಗಳೂ ಭೀತಿ ಹುಟ್ಟಿಸಿದೆ. ಇದರೊಂದಿಗೆ ಈಗ ಮಂಗಗಳೂ ಮನುಷ್ಯರ ಮೇಲೆ ಆಕ್ರಮಣ ಎಸಗುವ ಮಟ್ಟಕ್ಕೆ ಬಂದಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಮುಳಿಯಾರು ಗ್ರಾ. ಪಂ. ವ್ಯಾಪ್ತಿಯ ವನ್ಯಮೃಗ ಹಾವಳಿ ವಿರುದ್ಧ ಅರಣ್ಯ ಇಲಾಖೆ ಕ್ರಮಕೈಗೊಂಡು, ನಾಗರಿಕರಿಗೆ ಭಯಮುಕ್ತ ಜೀವನ ಸೌಲಭ್ಯ ಒದಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts