All News

ಆಹಾರ ಸಂರಕ್ಷಣೆ ಹೇಗೆ ಮಾಡಬೇಕು?

ನಮಗೆ ಬದುಕಲು ಆಹಾರ ಅತೀ ಅಗತ್ಯವಾಗಿ ಬೇಕು. ಆಹಾರದಲ್ಲಿ ಮುಖ್ಯವಾಗಿ ಅನ್ನಪದಾರ್ಥಗಳು, ತರಕಾರಿ, ಹಣ್ಣು ಹಂಪಲು ಸೇರಿರುತ್ತವೆ.ನಮಗೆ ಬೇಕಾದ ಎಲ್ಲಾ ಆಹಾರಗಳನ್ನು ನಾವೇ ತಯಾರಿಸಬೇಕಾಗುತ್ತದೆ

ಈ ಸುದ್ದಿಯನ್ನು ಶೇರ್ ಮಾಡಿ

ನಮಗೆ ಬದುಕಲು ಆಹಾರ ಅತೀ ಅಗತ್ಯವಾಗಿ ಬೇಕು. ಆಹಾರದಲ್ಲಿ ಮುಖ್ಯವಾಗಿ ಅನ್ನ ಪದಾರ್ಥಗಳು, ತರಕಾರಿ, ಹಣ್ಣು ಹಂಪಲು ಸೇರಿರುತ್ತವೆ. ನಮಗೆ ಬೇಕಾದ ಎಲ್ಲಾ ಆಹಾರಗಳನ್ನು ನಾವೇ ತಯಾರಿಸಬೇಕಾಗುತ್ತದೆ. ನಮ್ಮ ಎಲ್ಲಾ ಅಗತ್ಯ ಆಹಾರಗಳನ್ನು ಕೃಷಿಯ ಮೂಲಕವೇ ಉತ್ಪಾದಿಸಬೇಕಾಗುತ್ತದೆ. ನಮ್ಮ ದೇಶವು ಒಂದು ಕೃಷಿ ಪ್ರಧಾನ ದೇಶವಾಗಿದ್ದುಕೊಂಡು ಹೆಚ್ಚಿನ ಜನರು ಕೃಷಿಯಲ್ಲಿಯೇ ತೊಡಗಿಕೊಂಡಿರುತ್ತಾರೆ. ಅವರ ನಿರಂತರ ಶ್ರಮದಿಂದ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಉತ್ಪಾದಿಸಲಾಗುತ್ತದೆ. ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ ಉತ್ಪಾದಿಸಲ್ಪಟ್ಟ ಎಲ್ಲಾ ಆಹಾರ ವಸ್ತುಗಳು ಸರಿಯಾಗಿ ಬಳಕೆಯಾಗುತ್ತಿವೆಯೆ?

ನಾವು ಯಾವುದಾದರೂ ಸಮಾರಂಭಗಳಿಗೆ ಹೋದಾಗ ಅಲ್ಲಿ ಹಲವು ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ನಾವು ಕೆಲವನ್ನು ತಿನ್ನುತ್ತೇವೆ. ಹೊಟ್ಟೆ ತುಂಬಿದಾಗ ಉಳಿದ ವಸ್ತುಗಳನ್ನು ಬಿಸಾಡುತ್ತೇವೆ. ಒಂದು ಮದುವೆಯೋ ಅಥವಾ ಇತರ ಯಾವುದೋ ಕಾರ್ಯಕ್ರಮ ಮುಗಿದಾಗ ಅಲ್ಲಿ ಈ ರೀತಿಯಾಗಿ ಬಿಸಾಡಿದ ಆಹಾರದ ರಾಶಿಯನ್ನು ನೋಡಬಹುದು. ಅದು ಹಾಳಾಗಿ ಹೋಗಿರುತ್ತದೆ. ಅದನ್ನು ನೋಡುವಾಗ ನಮಗೆ ಬೇಸರವಾಗುತ್ತದೆ. ಯಾಕೆಂದರೆ ಅಂತಹ ಆಹಾರ ತಯಾರಿಸಲು ಬಳಸಿದ ತರಕಾರಿ, ದಿನಸಿ ಸಾಮಾಗ್ರಿಗಳು, ಇಂಧನ, ನೀರು ಕೂಡ ನಷ್ಟವಾಗಿರುತ್ತದೆ.

SRK Ladders

ಒಂದು ಮದುವೆಯಲ್ಲಿ  ಇಷ್ಟು ನಷ್ಟವಾದರೆ , ಸಾವಿರಾರು ಮದುವೆಗಳಲ್ಲಿ ಇನ್ಬೆಷ್ಟು ನಷ್ಟವಾಗಬಹುದು? ಇದರ ಕುರಿತು ನಾವು ಯೋಚನೆ ಮಾಡಿದ್ದೇವೆಯೇ? ನಾವು ಇಷ್ಟು ಪ್ರಮಾಣದಲ್ಲಿ ಆಹಾರ ಬಿಸಾಡುವಾಗ , ಇನ್ನೊಂದು ಕಡೆಯಲ್ಲಿ ಸರಿಯಾಗಿ ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲದೆ ಬಳಲುವವರು‌ ಲಕ್ಷಾಂತರ ಮಂದಿ. 

ಹೀಗಾಗಿ ವಿದ್ಯೆಕಲಿತ ನಾವು ಆಹಾರ ಸಂರಕ್ಷಣೆಯ ಕುರಿತು ಯೋಚಿಸಬೇಕಲ್ಲವೇ?

ನಮಗೆ ಅಂದರೆ ನಮ್ಮ ಹೊಟ್ಟೆಗೆ ಎಷ್ಟು ಆಹಾರ ಬೇಕು ಎಂದು ನಮಗೆ ಗೊತ್ತಿರುತ್ತದೆ. ಆದುದರಿಂದ ನಮಗೆ ಬೇಕಾದಷ್ಟು ಮತ್ತು ನಮಗೆ ಇಷ್ಟವಾದ ವಸ್ತುಗಳನ್ನು ಮಾತ್ರ ಹಾಕಿಸಿಕೊಳ್ಳೋಣ.. ಇದರಿಂದಾಗಿ ಅನಗತ್ಯ ನಷ್ಟವಾಗುವ ಆಹಾರ ವನ್ನು ಉಳಿಸಬಹುದು. 

ಇದು ಒಂದು ವಿಧದ ನಷ್ಟವಾದರೆ , ಇನ್ನೊಂದು ಕಡೆಯಲ್ಲಿ  ಬೆಳೆದ ವಸ್ತುಗಳನ್ನು ಮಾರುಕಟ್ಟೆಗೆ ತರುವಲ್ಲಿಯೂ ನಷ್ಟವಾಗುತ್ತದೆ. ತುಂಬಾ ಬೆಳೆ ಬೆಳೆದರೆ ಅವರು ಇತರ ಕಡೆಗೆ ಸಾಗಿಸಲೇ ಬೇಕು. ಅದರ ಬದಲು ಕಡಿಮೆ ಬೆಳೆಯುವವರು ತಮ್ಮ‌ ಮನೆಯ ಸುತ್ತ ಮುತ್ತ ಮಾರಾಟ ಮಾಡಿದರೆ ಲಾಭವೂ ಹೆಚ್ಚು. ಸಾಗಾಟ ವೆಚ್ಚವೂ ಕಡಿಮೆ. ತರಕಾರಿ ಹಣ್ಣು ಹಂಪಲು ಇತ್ಯಾದಿ ಒಳ್ಳೆಯ ರೀತಿಯಲ್ಲಿ ಸಿಗಲು ಸಾಧ್ಯ. ಈ ರೀತಿಯಾಗಿ ಕೆಲವೊಂದು ಕ್ರಮಗಳ ಮೂಲಕ ನಾವು ಆಹಾರ ಸಂರಕ್ಷಣೆಯನ್ನು ಮಾಡಬಹುದು.

-ಡಾ.ರಾಜೇಶ್ ಬೆಜ್ಜಂಗಳ


ಈ ಸುದ್ದಿಯನ್ನು ಶೇರ್ ಮಾಡಿ

Related Posts