All Newsದೇಶರಾಜ್ಯ ವಾರ್ತೆ

5 ಲಕ್ಷ ಉದ್ಯೋಗ ಸೃಷ್ಟಿಗೆ ಮುಂದಾದ ಟಾಟಾ!!

ರತನ್‌ ಟಾಟಾ ನಿಧನ ಭಾರತೀಯರ ಹೃದಯ ಭಾರವಾಗಿಸಿರುವ ವೇಳೆಯಲ್ಲೂ ನೆಮ್ಮದಿ ನೀಡುವ ಮಹತ್ವದ ಘೋಷಣೆಯನ್ನು ಟಾಟಾ ಗ್ರೂಪ್ ಮಾಡಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ರತನ್‌ ಟಾಟಾ ನಿಧನ ಭಾರತೀಯರ ಹೃದಯ ಭಾರವಾಗಿಸಿರುವ ವೇಳೆಯಲ್ಲೂ ನೆಮ್ಮದಿ ನೀಡುವ ಮಹತ್ವದ ಘೋಷಣೆಯನ್ನು ಟಾಟಾ ಗ್ರೂಪ್ ಮಾಡಿದೆ.

ಮುಂದಿನ 6 ವರ್ಷದಲ್ಲಿ ಟಾಟಾ ಗ್ರೂಪ್ ಬರೋಬ್ಬರಿ 5 ಲಕ್ಷ ಉದ್ಯೋಗಳನ್ನು ಸೃಷ್ಟಿಸುವುದಾಗಿ ಹೇಳಿದೆ.

SRK Ladders

ಟಾಟಾ ಗ್ರೂಪ್ ಈಗಾಗಲೇ ಸೆಮಿಕಂಡಕ್ಟರ್, ಎಲೆಕ್ಟಿಕ್ ಬ್ಯಾಟರಿ ಸೇರಿದಂತೆ ಹಲವು ಕೈಗಾರಿಕೋದ್ಯಮದಲ್ಲಿ ಭಾರಿ ಬಂಡವಾಳ ಹೂಡಿಕೆ ಮಾಡಿದೆ. ಹೀಗಾಗಿ ಮುಂದಿನ 6 ವರ್ಷದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಟಾಟಾ ಸನ್ಸ್ ಮುಖ್ಯಸ್ಥ ಎನ್ ಚಂದ್ರಶೇಖರನ್ ಹೇಳಿದ್ದಾರೆ.

ದೆಹಲಿಯಲ್ಲಿ ಆಯೋಜಿಸಿದ್ದ ಇಂಡಿಯನ್ ಫೌಂಡೇಷನ್ ಕ್ವಾಲಿಟಿಟ್ ಮ್ಯಾನೇಜೆಂಟ್(IFQM) ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ ಚಂದ್ರಶೇಖರನ್, ಭಾರತದಲ್ಲಿ ಉತ್ಪನ್ನಗಳ ಗುಣಮಟ್ಟತೆ, ಜನರ ಬದುಕು ಸುಮಗೊಳಿಸುವ ಕಾರ್ಯಕದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದಿದ್ದಾರೆ.

ಪ್ರತಿ ತಿಂಗಳು ಸುಮಾರು 10 ಲಕ್ಷ ಮಂದಿ ವಿದ್ಯಾಭ್ಯಾಸ, ಕೋರ್ಸ್ ಪೊರೈಸಿ ಉದ್ಯೋಗ ಅರಸುತ್ತಾ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ನಾವು 100 ಮಿಲಿಯನ್ ಉದ್ಯೋಗವನ್ನು ಸೃಷ್ಟಿಸಬೇಕಿದೆ ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ. ಭಾರತ ಇದೀಗ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಇಷ್ಟೇ ಅಲ್ಲ ಭಾರತ ವಿಶ್ವದ ಮಾನಸಂಪನ್ಮೂಲ ರಾಜಧಾನಿಯಾಗಿ ಬೆಳೆಯುತ್ತಿದೆ ಎಂದು ಎನ್ ಚಂದ್ರಶೇಖರನ್ ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 3