ಪುತ್ತೂರು: ಇಲ್ಲಿನ ಮೈತ್ರಿ ಇಲೆಕ್ಟ್ರಿಕ್ ಕಂ. ಇದರ ಪ್ರಮುಖ ಗ್ರಾಹಕ ಇಲೆಕ್ಟ್ರೀಷಿಯನ್’ಗಳಿಗೆ ಅರಿತುಕೊಳ್ಳಿ ವಿಶಿಷ್ಟ ಕಾರ್ಯಕ್ರಮದ ಅಡಿಯಲ್ಲಿ ತುಮಕೂರಿನ ಹ್ಯಾವಲ್ಸ್ ವಯರ್ ಫ್ಯಾಕ್ಟರಿಗೆ ಭೇಟಿ ನೀಡಲಾಯಿತು.
ಹೊಸ ತಂತ್ರಜ್ಆನಗಳ ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಪರಿಚಯಿಸುವ ಉದ್ದೇಶದಿಂದ ಅರಿತುಕೊಳ್ಳಿ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ.
ಈ ಬಾರಿ 40 ಮಂದಿ ಟೆಕ್ನಿಷಿಯನ್ ಗಳು ಭೇಟಿ ನೀಡಿದರು. ಹ್ಯಾವಲ್ಸ್ ಕಂಪೆನಿಯ ಪ್ಲ್ಯಾಂಟ್ ಹೆಡ್ ದೇವೇಶ್ ಶರ್ಮಾ ಅವರು ಮಾಹಿತಿ ನೀಡಿದರು. ಹ್ಯಾವಲ್ಸ್ ಕಂಪನಿಯ ಸಹಾಯಕ ಜನರಲ್ ಮ್ಯಾನೆಜರ್ ನರೇಂದ್ರ ಕುಲಕರ್ಣಿ ಅವರು ಹ್ಯಾವಲ್ಸ್ ಉತ್ಪನ್ನಗಳ ಬಗ್ಗೆ ವಿವರವಾಗಿ ವಿವರಿಸಿದರು.
ಇಲೆಕ್ಟ್ರೀಷಿಯನ್‌ಗಳು ಹ್ಯಾವಲ್ಸ್ ಯು ಜಿ ಕೇಬಲ್ ಹಾಗೂ ಹೌಸ್ ವಯರ್‌ಗಳ ಉತ್ಪಾದನೆಯನ್ನು ವೀಕ್ಷಿಸಿ ಮಾಹಿತಿ ಪಡಕೊಂಡರು.
ಹ್ಯಾವೆಲ್ಸ್ ಕಂಪನಿಯ ಏರಿಯ ಸೇಲ್ಸ್ ಮ್ಯಾನೆಜರ್‌ಗಳಾದ ರಾಜೇಶ್ ಯಂ.ಪಿ, ವಿಶಾಲ್, ನಿತಿನ್ ಮತ್ತು ಮೈತ್ರಿ ಎಲೆಕ್ಟ್ರಿಕ್ ಕಂ. ಇದರ ಉರ್ಬನ್ ಡಿ’ಸೋಜಾ ಹಾಗೂ ಉಮೇಶ್ ಕುಲಾಲ್ ಸಹಕಾರದಲ್ಲಿ ಫ್ಯಾಕ್ಟರಿ ಭೇಟಿ ಕಾರ್ಯಕ್ರಮ ನಡೆಯಿತು.
























