pashupathi
ಅಪರಾಧಪ್ರಚಲಿತ

ಪ್ರಜ್ವಲ್ ರೇವಣ ಪ್ರಕರಣ: ಅತ್ಯಾಚಾರ ಸಾಬೀತು!!| ಶಿಕ್ಷೆ, ದಂಡ ವಿಧಿಸಿ ತೀರ್ಪಿತ್ತ ನ್ಯಾಯಾಲಯ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಅತ್ಯಾಚಾರ ಕೇಸ್’ ನಲ್ಲಿ ಮಾಜಿ ಸಂಸದ ‘ಪ್ರಜ್ವಲ್ ‘ (Prajwal Revanna) ‘ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್’ ನಿನ್ನೆ ಮಹತ್ವದ ತೀರ್ಪು ಪ್ರಕಟಿಸಿದ್ದು, ಇದೀಗ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಅತ್ಯಾಚಾರ ಕೇಸ್’ ನಲ್ಲಿ ‘ಪ್ರಜ್ವಲ್ ರೇವಣ್ಣ’ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದು, ಜೀವಾವಧಿ ಶಿಕ್ಷೆ ಜೊತೆಗೆ 5 ಲಕ್ಷ ರೂ.ದಂಡ ವಿಧಿಸಲಾಗಿದೆ.

akshaya college

ಪ್ರಜ್ವಲ್‌ ರೇವಣ್ಣಗೆ ಇಂದಿನಿಂದಲೇ ಜೈಲುಶಿಕ್ಷೆ ಆರಂಭವಾಗಲಿದೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರದ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಇದಾಗಿದೆ. ಇಂದು ಕೋರ್ಟ್ ನಲ್ಲಿ ನಡೆದ ವಾದ ವಿವಾದ ಆಲಿಸಿದ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಜಡ್ಜ್ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದ್ದಾರೆ.

ಕೋರ್ಟ್ ನಲ್ಲಿ ಇಂದು ಏನೇನಾಯ್ತು..?

  • ಸಂಸದನಾಗಿ ಇಂತಹ ನೀಚ ಕೃತ್ಯ : SPP ಜಗದೀಶ್ವಾದ
  • “(ಸಂತ್ರಸ್ತೆ) ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಲಾಗಿದೆ. ಆತ ಒಬ್ಬ ಸಂಸದನಾಗಿ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಮನೆಕೆಲಸದಳ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಇದು ಆತನ ಮನಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುತ್ತದೆ. ಆತನಿಗೆ ನೀಡುವ ಶಿಕ್ಷೆ ಬೇರೆಯವರಿಗೆ ಎಚ್ಚರಿಕೆ ಸಂದೇಶವಾಗಬೇಕು ಎಂದು” ಪ್ರಾಸಿಕ್ಯೂಷನ್ ಪರ ಎಸ್ ಪಿಪಿ ಬಿ.ಎನ್ ಜಗದೀಶ್ ವಾದ ಮಂಡಿಸಿದ್ದಾರೆ .ಹಣ, ಅಧಿಕಾರವಿರುವವರಿಗೆ ಕಡಿಮೆ ಶಿಕ್ಷೆ ಪ್ರಕಟ ಮಾಡಬಾರದು. ಪ್ರಭಾವಿಗಳಿಗೆ ಕಡಿಮೆ ಶಿಕ್ಷೆ ಎನ್ನುವ ತಪ್ಪು ಸಂದೇಶ ಹೋಗಬಾರದು ಎಂದು ವಾದ ಮಂಡಿಸಿದರು.
    “ಸಂತ್ರಸ್ತೆಯ ವಿಡಿಯೋ ವೈರಲ್ ಆಗಿ ಆಕೆ ಎಲ್ಲೂ ಕೂಡ ದುಡಿಯಲು ಹೋಗದಂತಾಗಿದೆ. ಪ್ರಜ್ವಲ್ ರೇವಣ್ಣಗೆ ದಂಡ ವಿಧಿಸಿ ಅದರ ದೊಡ್ಡ ಭಾಗ ಮಹಿಳೆಗೆ ನೀಡಬೇಕು. ಪ್ರಜ್ವಲ್ ರೇವಣ್ಣ ಕರೋಡ್ ಪತಿಯಲ್ಲ” ಎಂದು ಕೋರ್ಟ್ ನಲ್ಲಿ SPP ಅಶೋಕ್ ನಾಯಕ್ ವಾದ ಮಂಡಿಸಿದರು.
    ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ವಾದ
  • ಪ್ರಜ್ವಲ್ ವಯಸ್ಸು ಕೇವಲ 34 ವರ್ಷ. ಆತನ ತಾತ ಮಾಜಿ ಪ್ರಧಾನಿ. ಇಷ್ಟು ದಿನದ ಆತನ ರಾಜಕೀಯ ಸ್ಥಾನಮಾನ ಹಾಳು ಮಾಡಬಾರದು. ಅದು ಚುನಾವಣೆ ವೇಳೆ ಆತನ ವೀಡಿಯೋ ಹರಿಬಿಡಲಾಗಿದೆ. ರಾಜಕೀಯ ಭವಿಷ್ಯ ಹಾಳು ಮಾಡುವ ಉದ್ದೇಶದಿಂದಲೇ ವಿಡಿಯೋ ಹರಿಬಿಡಲಾಗಿದೆ. ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಆದೇಶ ಹೊರಡಿಸಬೇಕು. ಸಂತ್ರಸ್ತೆಗಿಂತ ಅಪರಾಧಿಗೆ ಹೆಚ್ಚು ಹಾನಿಯಾಗಿದೆ” ಎಂದು ಪ್ರಜ್ವಲ್ ಪರ ಹಿರಿಯ ವಕೀಲೆ ನಳಿನಾ ಮಾಯಗೌಡ ವಾದ ಮಂಡಿಸಿದ್ದಾರೆ
  • ಪ್ರಕರಣದ ಹಿನ್ನೆಲೆ
    2024ರ ಏಪ್ರಿಲ್ 28ರಂದು ಹೊಳೆನರಸೀಪುರ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೈಸೂರಿನ ಕೆ ಆರ್ ನಗರದ ಸಂತ್ರಸ್ತ ಮಹಿಳೆ ಈ ಸಂಬಂಧ ದೂರು ನೀಡಿದ್ದರು. ಮಹಿಳೆ ನೀಡಿದ್ದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ 376(2)(2), 376(2)(8), 506, 354-2, 354(2), 354(2), 354(2) 23 3 3 662 ಅಡಿ ಪ್ರಕರಣ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
    ನಂತರ ಈ ಪ್ರಕರಣದ ತನಿಖೆಗಾಗಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಈ ತಂಡದ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2,000 ಪುಟಗಳ ಚಾರ್ಜ್ ಶೀಟನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 2024ರ ಅಂತ್ಯದಲ್ಲಿ ಈ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 103