Gl
ಪ್ರಚಲಿತ

ಏರಿಂಡಿಯಾ ವಿಮಾನದ ಒಳಗೇ ಗಂಡು ಮಗು ಹೆತ್ತ ಥಾಯ್ಲೆಂಡ್ ಮಹಿಳೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಸ್ಕತ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಥಾಯ್ಲೆಂಡ್ ಮಹಿಳೆಯೊಬ್ಬರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಏರ್ ಇಂಡಿಯಾ ಹೇಳಿಕೆ ಬಿಡುಗಡೆ ಮಾಡಿದ್ದು, ‘ಥಾಯ್ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿದ್ದ ಸಿಬ್ಬಂದಿ, ಹೆರಿಗೆಗೆ ಸೂಕ್ತವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು.

core technologies

ಆಗಸದಲ್ಲಿದ್ದಾಗಲೇ ಪೈಲಟ್‌ಗಳು ಮಾಹಿತಿ ನೀಡಿದ್ದ ಕಾರಣ, ವಿಮಾನ ಮುಂಬೈನಲ್ಲಿ ಬಂದು ಇಳಿಯುತ್ತಿದ್ದಂತೆ ನಿಲ್ದಾಣದಲ್ಲಿ ಕಾದಿದ್ದ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು’ ಎಂದು ತಿಳಿಸಿದ್ದಾರೆ.

ಗುರುವಾರ ಮಸ್ಕತ್‌ನಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಥಾಯ್ ಮಹಿಳೆಗೆ ವಿಮಾನದ ಮಧ್ಯದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದಲ್ಲಿ ಯಾವುದೇ ವೈದ್ಯಕೀಯ ವೃತ್ತಿಪರರು ಇಲ್ಲದಿದ್ದಾಗ ಕ್ಯಾಬಿನ್ ಸಿಬ್ಬಂದಿ ಸಹಾಯ ಮಾಡಲು ಮುಂದಾದರು. ವಿಮಾನದ ನಿಗದಿತ ಲ್ಯಾಂಡಿಂಗ್‌ಗೆ ಕೇವಲ 45 ನಿಮಿಷಗಳ ಮೊದಲು ವಿಮಾನದೊಳಗೆ ಹೆರಿಗೆ ಸಂಭವಿಸಿದ್ದು, ವಿಮಾನಯಾನ ತಂಡದಿಂದ ತ್ವರಿತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪ್ರಯಾಣಿಕರಲ್ಲಿ ಯಾವದೇ ವೈದ್ಯರಿಲ್ಲದ ಕಾರಣ, ಏರ್‌ಲೈನ್‌ನ ಉನ್ನತ ತರಬೇತಿ ಪಡೆದ ಸಿಬ್ಬಂದಿ ಮಧ್ಯಪ್ರವೇಶಿಸಿದರು. ಹಿರಿಯ ಕ್ಯಾಬಿನ್ ಸಿಬ್ಬಂದಿ ಸ್ನೇಹಾ ನಾಗ್‌, ವಿಮಾನ ಸಿಬ್ಬಂದಿ ಐಶ್ವರ್ಯಾ ಶಿರ್ಕೆ, ಆಸಿಯಾ ಖಾಲಿದ್ ಮತ್ತು ಮುಸ್ಕಾನ್ ಚೌಹಾಣ್ ಅವರ ಬೆಂಬಲದೊಂದಿಗೆ, 30,000 ಅಡಿ ಎತ್ತರದಲ್ಲಿ ವಿಮಾನದಲ್ಲಿ ಆರೋಗ್ಯಕರ ಗಂಡು ಮಗುವಿಗೆ ಜನ್ಮ ನೀಡಲು ಸಹಾಯ ಮಾಡಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts