pashupathi
ಅಪಘಾತಪ್ರಚಲಿತ

ಬಡವರಿಗೆ ನೆರವಾಗಲು ವೇಷ ಧರಿಸುತ್ತಿದ್ದ ಅಣ್ಣಪ್ಪ ವಿಧಿಯಾಟಕ್ಕೆ ಬಲಿ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬನ್ನೂರಿನ ಮೇಲ್ಮಜಲು ನಿವಾಸಿ ಅಣ್ಣಪ್ಪ ಪುತ್ತೂರು (26 ವ.) ಇಂದು ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

akshaya college

ಮೊದಲಿಗೆ ಪುತ್ತೂರಿನ ಸೇವಾ ಸಂಸ್ಥೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮೂಲಕ ವಿಶೇಷ ವೇಷ ಧರಿಸಿ ಹಲವಾರು ಬಡ ಕುಟುಂಬದ ಮಕ್ಕಳಿಗೆ ಮತ್ತು ಆರೋಗ್ಯದ ಸಮಸ್ಯೆ ಇರುವಂತಹ ವ್ಯಕ್ತಿಗಳಿಗೆ ತನ್ನ ಕೈಲಾದಷ್ಟು ಜಾತ್ರೆ ಅಥವಾ ಇನ್ನಿತರ ಕಾರ್ಯಕ್ರಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅದರಲ್ಲಿ ಬಂದಂತಹ ಹಣವನ್ನು ಅವರ ಕೈಗೆ ಒಪ್ಪಿಸುತ್ತಿದ್ದರು.

ತನ್ನದೇ ಆದ ಕಲಾಸಿರಿ ಗೊಂಬೆ ಬಳಗ (ರಿ) ಪುತ್ತೂರು ಇದನ್ನು ಪ್ರಾರಂಭಿಸಿದರು. ವರ್ಷದಲ್ಲಿ ಒಂದು ದಿನ ಗೊಂಬೆ ವೇಷ ಧರಿಸಿ ಅದರಲ್ಲಿ ಬಂದಂತಹ ಹಣವನ್ನು ಬಡಕುಟುಂಬಗಳಿಗೆ ಹಾಗೂ ಅನಾರೋಗ್ಯದಿಂದ ಇರುವ ಕುಟುಂಬಗಳಿಗೆ ಧನಸಹಾಯದ ಮೂಲಕ ಸಹಾಯ ಮಾಡಿದ್ದಾರೆ.

ಮೃತರು ಸಹೋದರಿಯನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts