pashupathi
ಅಪಘಾತಪ್ರಚಲಿತ

ಪೇರೋಡಿ ಪುತ್ತಿಗೆ ಗುತ್ತಿನ ಚೀಂಕ್ರ ಶೇಕ್ ಹ್ಯಾಂಡ್ ಕೊಡುವ ಕೋಣ  ನಿಧನ!!

tv clinic
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಮತ್ತು ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರ ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ (ಜೂ.10) ನಿಧನವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಾರ್ಕಳ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಮತ್ತು ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರ ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ (ಜೂ.10) ನಿಧನವಾಗಿದೆ.

akshaya college

ಈ ಕೋಣವು ತನ್ನ ಮಾಲಕ ಕೌಶಿಕ್ ದಿನಕ‌ರ್ ಶೆಟ್ಟಿ ಅವರೊಂದಿಗೆ ‘ಶೇಕ್ ಹ್ಯಾಂಡ್’ ನೀಡುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಇದರ ವಿಶಿಷ್ಟ ಸಾಮರ್ಥ್ಯ ಮತ್ತು ಸ್ನೇಹಪರ ಸ್ವಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ಕೋಣ ತನ್ನ ಛಾಪು ಮೂಡಿಸಿತ್ತು. ಕಾರ್ಕಳದ ಮುಖೇಶ ಕೋಣದ ಜತೆಗೆ ಜೂನಿಯ‌ರ್ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಕಂಬಳ ಸೀಸನ್‌ನಲ್ಲೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

ಐದು ವರ್ಷದ ಪ್ರಾಯದಲ್ಲಿ ಜ್ವರದಿಂದ ಅಕಾಲಿಕ ಮರಣ ಹೊಂದಿದ ಈ ಕೋಣದ ನಿಧನವು ಅದರ ಅಭಿಮಾನಿಗಳು ಮತ್ತು ಕಂಬಳ ವಲಯದಲ್ಲಿ ದುಃಖವನ್ನುಂಟು ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts