Gl ugadhi
ಪ್ರಚಲಿತ

ಗೇರುಕಟ್ಟೆ ಮಾತೃ ವಂದನಾ ಕಾರ್ಯಕ್ರಮ

ಗೇರುಕಟ್ಟೆಯ ಕ್ಷೀರ ಸಂಗಮ ಸಭಾಭವನದಲ್ಲಿ 48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಯುಗಾದಿಯಂದು ಬಹಳ ಅರ್ಥಪೂರ್ಣವಾಗಿ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ರಿ. ಕರ್ನಾಟಕ ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಗೇರುಕಟ್ಟೆಯ
ಕ್ಷೀರ ಸಂಗಮ ಸಭಾಭವನದಲ್ಲಿ 48 ದಿನ ನಡೆದ ಯೋಗ ತರಬೇತಿ ಶಿಬಿರದ ಸಮಾರೋಪವು ಮಾತೃ ವಂದನಾ, ಮಾತೃ ಧ್ಯಾನ, ಮಾತೃ ಭೋಜನ ಕಾರ್ಯಕ್ರಮದೊಂದಿಗೆ ಯುಗಾದಿಯಂದು ಬಹಳ ಅರ್ಥಪೂರ್ಣವಾಗಿ ಜರಗಿತು.

srk ladders
Pashupathi
Muliya

ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಬಹಳ ಗೌರವವಿದೆ. ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ ಪ್ರತಿಯೊಬ್ಬರ ಜೀವನದಲ್ಲಿ ಪ್ರಭಾವ ಬೀರುವ ದೇವತಾ ಸ್ವರೂಪಿ. ಆ ದಿವ್ಯವಾದ ಶಕ್ತಿಗೆ ಕೃತಜ್ಞತೆ ಅರ್ಪಿಸುವುದು ನಮ್ಮ ಕರ್ತವ್ಯವೆಂದು ಮುಖ್ಯಭಾಷಣಗಾರ ತುಮಕೂರು ಕೇಂದ್ರ ಸಮಿತಿಯ ಪ್ರಾಂತ ಪ್ರಶಿಕ್ಷಣ ಪ್ರಮುಖ್ ಲಕ್ಷ್ಮೀನಾರಾಯಣ ತಿಳಿಸಿದರು.ಬಾಲ್ಯದಲ್ಲಿ
ತಾಯಿ ತೋರಿಸಿದ ಪ್ರೀತಿ, ಮಮತೆ, ಮಕ್ಕಳಿಗಾಗಿ ಮಾಡಿದ ತ್ಯಾಗದ ಬಗ್ಗೆ ಮಾತು ಮತ್ತು ಹಾಡಿನ ಮೂಲಕ ಮಾತ್ರ ಧ್ಯಾನದಲ್ಲಿ ಅವರು ಎಲ್ಲರಿಗೂ ನೆನಪಿಸಿದರು.

ಮುಖ್ಯ ಅತಿಥಿಯಾಗಿದ್ದ ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ
ಶ್ರೀಮತಿ ಗುಲಾಬಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮಾತಾ ಪಿತರನ್ನು ಅತ್ಯಂತ ಶ್ರದ್ದೆಯಿಂದ ನೋಡಿಕೊಳ್ಳುಬೇಕೆಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೋಗ ತರಬೇತಿ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಮಾತನಾಡಿ 48 ದಿನಗಳ ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನೂ ನೆನಪಿಸಿಕೊಂಡು ಈ ಶಾಖೆಯಲ್ಲಿ ಯೋಗ ತರಬೇತಿಯು ನಿರಂತರವಾಗಿ ನಡೆಯುಬೇಕೆಂದು ತಿಳಿಸಿದರು.

ಪದ್ಮಲತಾ, ತುಕಾರಾಮ,ರೇಖಾ,ದಿವಾಕರ ಆಚಾರ್ಯ,ಶಿವಣ್ಣ ಅನುಭವ ಹಂಚಿಕೊಂಡರು.ಆರಂಭದಲ್ಲಿ ಭಜನೆ, ಆಟೋಟಗಳು, ನಗುವೇ ಯೋಗ ನಡೆಯಿತು.ಬಳಿಕ ಮುಖ್ಯ ಶಿಕ್ಷಕಿ ಪ್ರೇಮಲತಾ ಗಣೇಶ್,ಕಾವ್ಯ, ಅನುಪಮಾ,ದಿವ್ಯ, ಪದ್ಮಲತಾ, ಸುಭಾಷಿಣಿ, ಭಾರತಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಕುಮಾರಿ ವೈಷ್ಣವಿ ಪ್ರಾರ್ಥನೆ ಮಾಡಿದರು. ರೂಪ ಸ್ವಾಗತಿಸಿ ಶುಭಾಷಿಣಿ ವರದಿ ವಾಚಿಸಿದರು ದಿವ್ಯ ವಂದಿಸಿ ಮೀರಾ ಕಾರ್ಯಕ್ರಮ ನಿರೂಪಿಸಿದರು.
ಮಾತೃ ಭೋಜನದಲ್ಲಿ ಯೋಗ ಬಂಧುಗಳು ಮತ್ತು ಮನೆಯವರು ಹಾಗೂ ಸಮುದಾಯದ ಗಣ್ಯರು ಭಾಗವಹಿಸಿದ್ದರು. ಹಿರಿಯರಿಂದ ಆಶೀರ್ವಾದವನ್ನು ಪಡೆದು ವಿಶೇಷವಾಗಿ ಸಿದ್ಧಪಡಿಸಿದ ಪ್ರಸಾದವನ್ನು ಮಾತೆಯ ಕೈತುತ್ತಿನಂತೆ ಸ್ವೀಕರಿಸಿದರು. ನೂರಾರು ಹಣತೆ ದೀಪದ ಬೆಳಕಿನಲ್ಲಿ ಪ್ರಕೃತಿದತ್ತವಾಗಿ ಸಿಗುವ ವಸ್ತುಗಳಿಂದಲೇ ಅಲಂಕರಿಸಲ್ಪಟ್ಟ ವೇದಿಕೆ ಮತ್ತು ಸಭಾಂಗಣ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಕೇಂದ್ರದ ಸಹ ಶಿಕ್ಷಕ ಸುಕೇಶ್ ಮತ್ತು ಜಿಲ್ಲೆಯ ಬೇರೆ ಬೇರೆ ಕೇಂದ್ರಗಳಿಂದ ಆಗಮಿಸಿದ ಯೋಗ ಬಂಧುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts