ಚಿಕ್ಕಮಗಳೂರು: ಆನೆ ದಾಳಿಗೆ ರೈತ ಮೃತಪಟ್ಟ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಗುರುಪುರ ಗ್ರಾಮದಲ್ಲಿ ಮಾ.31ರ ಸೋಮವಾರ ನಡೆದಿದೆ.
ವೆಂಕಟೇಶ್ (58) ಮೃತಪಟ್ಟ ರೈತ.ರೈತ ವೆಂಕಟೇಶ್ ಮನೆ ಮುಂದೆ ತೋಟದಲ್ಲಿ ಹಸು ಕಟ್ಟುವಾಗ ಆನೆ ದಾಳಿ ನಡೆಸಿದೆ. ಆ ಒಂಟಿ ಸಲಗ ರೈತನನ್ನು ಸೊಂಡಿಲಿನಲ್ಲಿ ಸುತ್ತಿ ತೆಂಗಿನ ಮರಕ್ಕೆ ಹೊಡೆದಿದೆ.
ಆನೆ ಉಸಿರಾಟದ ಶಬ್ದ ಕೇಳಿ ಆನೆ ಇರುವುದನ್ನು ಅರಿತ ರೈತ ಕೂಡಲೇ ಟಾರ್ಚ್ ಹಾಕಿದ್ದಾನೆ. ಟಾರ್ಚ್ ಹಾಕುತ್ತಿದ್ದಂತೆ ಆನೆ ಸೊಂಡಿಲಿನಲ್ಲಿ ರೈತನನ್ನು ಮರಕ್ಕೆ ಹೊಡೆದಿದೆ. ಈ ಪರಿಣಾಮ ರೈತ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಒಂಟಿ ಸಲಗದ ಕಾಟಕ್ಕೆ ಬೇಸತ್ತಿರೋ ಲಕ್ಕವಳ್ಳಿ ಹೋಬಳಿ ಜನರು, ಪರಿಹಾರ ಕೊಡುವುದರಿಂದ ಜೀವ ತರಲ್ಲ, ಆನೆಯನ್ನು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಾರ್ವಜನಿಕರು ಮನವಿ