ಪುತ್ತೂರು: ಪುತ್ತೂರು ಸೀಮೆ ದೈವಗಳಾದ ಪೂಮಾಣಿ ಮತ್ತು ಕಿನ್ನಿಮಾಣಿ ದೈವಸ್ಥಾನದಲ್ಲಿ ಆರ್ಯಾಪು ಗ್ರಾಮದ ಬಾರಿಕೆ ಮನೆತನದ ಮುಂದಾಳುತ್ವದಲ್ಲಿ ಭಾನುವಾರ ನೇಮೋತ್ಸವ ನಡೆಯಿತು.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಿದ್ದು, ಬೆಳಿಗ್ಗೆ ಗಣಹೋಮ ನಡೆಯಿತು.

ಆರ್ಯಾಪು ಗ್ರಾಮದ ಬಾರಿಕೆ ಎಂಬಲ್ಲಿ ಬಳ್ಳೇರಿ ಮಲೆಗೆ ಹೊಂದಿಕೊಂಡತಿರುವ ಎತ್ತರದ ಪ್ರದೇಶದಲ್ಲಿ ದೈವಗಳು ನೆಲೆ ನಿಂತಿದ್ದು, ಕಳೆದ 10 ವರ್ಷಗಳಿಂದ ನೇಮ ನಡೆದು ಬರುತ್ತಿದೆ. ಮೊದಲಿಗೆ ಪೂಮಾಣಿ ದೈವದ ವಾಲಸರಿ ಆಗಮಿಸಿ, ನೇಮ ನಡೆಯಿತು. ನಂತರ ಕಿನ್ನಿಮಾಣಿ ದೈವದ ವಾಲಸರಿ ಆಗಮಿಸಿ ನೇಮ ಜರಗಿತು.
ಶನಿವಾರ ರಾತ್ರಿ ಬಾರಿಕೆ ಮನೆಯಲ್ಲಿ ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.
ಅನುವಂಶೀಯ ಆಡಳಿತ ಮೊಕ್ತೇಸರರಾದ ಬಿ. ಮಂಜಪ್ಪ ರೈ ಬಾರಿಕೆ ಮನೆ, ವಿದ್ಯಾಧರ ಜೈನ್ ಉಪ್ಪಿನಂಗಡಿ, ಪುತ್ತೂರು ತಾಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ರಾಜೇಶ್ ಬನ್ನೂರು, ಜಯಂತ್ ಶೆಟ್ಟಿ ಕಂಬಳತ್ತಡ್ಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.