Share News

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

6 ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಕಳೆದ 4 ವಾರಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಪಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಮತ್ತೊಂದೆಡೆ ರೆಗ್ಯೂಲರ್ ಬೇಲ್‌ಗೆ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಡಿ. 2 ರಂದು ಸೋಮವಾರ ವಿಚಾರಣೆ ಮುಂದುವರಿಯಲಿದೆ, ಈ ನಡುವೆ ದರ್ಶನ್ ಅವರು ಚಿಕಿತ್ಸೆ ಪಡೆಯುತ್ತಿರುವ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿದೆ.

ತುರ್ತು ಚಿಕಿತ್ಸೆಗಾಗಿಯೇ ಹೈಕೋರ್ಟ್ ನಟ ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಚಿಕಿತ್ಸೆಗಾಗಿಯೇ ದರ್ಶನ್ ಬೆಂಗಳೂರಿಗೆ ಬಂದು 32 ದಿನಗಳು ಮುಗಿದು ಹೋಗಿವೆ. ಇನ್ನೂ 9 ದಿನಗಳು ಕಳೆದರೆ ಮತ್ತೆ ದರ್ಶನ್ ಜೈಲಿಗೆ ವಾಪಸ್ಸಾಗಬೇಕು. ಅಷ್ಟರಲ್ಲಿ ರೆಗ್ಯೂಲ‌ರ್ ಬೇಲ್ ಸಿಕ್ಕರೆ ದರ್ಶನ್ ಸೇಫ್ ಅಂತ ಹೇಳಲಾಗ್ತಿದೆ.

ಸದ್ಯಕ್ಕೆ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಆಗಿಲ್ಲ. ಕಾರಣ, ಅವರು ರಕ್ತದೊತ್ತಡದಿಂದ ಬಳಲ್ತಾ ಇದ್ದಾರಂತೆ. ಬಿಪಿ ಕಂಟ್ರೋಲ್‌ಗೆ ಬಾರದೇ ಇರೋ ಕಾರಣದಿಂದಾಗಿ ಇನ್ನೂ ಸರ್ಜರಿ ಮಾಡಲಾಗಿಲ್ಲವಂತೆ. ಹಾಗಂತ ಸರ್ಜರಿ ಆಗೋದೇ ಇಲ್ಲವಾ? ಈವರೆಗೂ ಅದು ಕಷ್ಟ ಕಷ್ಟ ಅಂತ ನಂಬಲಾಗಿತ್ತು. ಸರ್ಜರಿಗೆ ದರ್ಶನ್ ಮನಸು ಮಾಡದೇ ಇರೋ ಕಾರಣದಿಂದಾಗಿ, ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಈಗ ದರ್ಶನ್ ಸರ್ಜರಿಗೆ ಒಪ್ಪಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಾ ಇದೆ. ಸರ್ಜರಿ ಆಗದೇ ಇದ್ದರೆ, ಡಬಲ್ ಸಂಕಷ್ಟ ಎದುರಾಗೋ ಕಾರಣದಿಂದಾಗಿ ಸರ್ಜರಿ ಮಾಡಿಸಿಕೊಳ್ಳೋಕೆ ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ.


Share News

Comments are closed.

Exit mobile version