Share News

ಭಾರತದ ಮೊದಲ ಬುಲೆಟ್ ರೈಲು ಮಾರ್ಗ ಕಾಮಗಾರಿ ವೇಳೆ ಸಂಭವಿಸಿದ ಅವಘಡದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮುಂಬೈ-ಅಹಮ್ಮದಾಬಾದ್ ಬುಲೆಟ್ ರೈಲಿನ ಹಳಿ ಕಾಮಗಾರಿಯ ವೇಳೆ ತಾತ್ಕಾಲಿಕ ಗೋಡೆ ಕುಸಿತಗೊಂಡು ಈ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಮತ್ತೋರ್ವ ಕಾರ್ಮಿಕನಿಗೆ ಚಿಕಿತ್ಸೆ ಮುಂದುವರಿದಿದೆ.

ವಸಾದ್ ಗ್ರಾಮದ ಬಳಿ ದೇಶದ ಮೊದಲ ಬುಲೆಟ್ ರೈಲು ಹಳಿ ಕಾಮಗಾರಿ ಬಿರುಸಿನಿಂದ ಸಾಗುತ್ತಿತ್ತು. ಅಡಿಪಾಯಕ್ಕಾಗಿ ದೊಡ್ಡ ದೊಡ್ಡ ಕಾಂಕ್ರೀಟ್ ಬ್ಲಾಕ್ ಹಾಗೂ ಕಬ್ಬಿಣದ ಸರಕುಗಳನ್ನು ಇಡಲಾಗಿತ್ತು. ಕಾಮಗಾರಿ ಪಕ್ಕದಲ್ಲೇ ಈ ಕಾಂಕ್ರೀಟ್ ಬ್ಲಾಕ್ ಸೇರಿದಂತೆ ಇತರ ಕಾಮಗಾರಿ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಈ ವೇಳೆ ತಾತ್ಕಾಲಿಕವಾಗಿ ಇಟ್ಟಿದ್ದ ಕಾಂಕ್ರೀಟ್ ಬ್ಲಾಕ್ ಹಾಗೂ ಕಬ್ಬಿಣದ ರಾಡ್‌ಗಳು ದಿಢೀರ್ ಕುಸಿತಗೊಂಡಿವೆ. ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ತಕ್ಷಣವೇ ರಕ್ಷಣಾ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು. ಇಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.

ನಾಲ್ವರು ಕಾರ್ಮಿಕರು ಈ ಬ್ಲಾಕ್ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಬ್ಲಾಕ್ಸ್ ತೆರವು ಮಾಡಿ ಕಾರ್ಮಿಕರ ರಕ್ಷಣೆ ಮಾಡುವಷ್ಟರಲ್ಲಿ ಇಬ್ಬರು ಮೃತಪಟ್ಟಿದ್ದರು. ಮತ್ತೊರ್ವನನ್ನು ಹೊರತೆಗೆದರೂ ಬದುಕಿ ಉಳಿಯಲಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಧರ್ಮೇಶ್ ಗೋರ್ ಹೇಳಿದ್ದಾರೆ.

508 ಕಿಲೋಮೀಟರ್ ಉದ್ದ ಮುಂಬೈ-ಅಹಮ್ಮದಬಾದ್ ಬುಲೆಟ್ ರೈಲಿಗಾಗಿ ಈ ಕಾಮಗಾರಿ ನಡೆಯುತ್ತಿತ್ತು. ಗುಜರಾತ್‌ನಲ್ಲಿ 352 ಕಿ.ಮೀ ಹಾಗೂ ಮಹಾರಾಷ್ಟ್ರದಲ್ಲಿ 156 ಕಿಲೋಮೀಟ‌ರ್ ಹಳಿ ಕಾಮಗಾರಿ ನಡೆಯುತ್ತಿದೆ. 508 ಕಿ.ಮೀ ಪ್ರಯಾಣದಲ್ಲಿ ಒಟ್ಟು 12 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಸದ್ಯ ಮುಂಬೈನಿಂದ ಅಹಮ್ಮದಾಬಾದ್ ಪ್ರಯಾಣಕ್ಕೆ ಕನಿಷ್ಠ 6 ರಿಂದ 8 ಗಂಟೆಗಳ ಸಮಯ ಅಗತ್ಯವಿದೆ. ಆದರೆ ಬುಲೆಟ್ ರೈಲು ಕೇವಲ 3 ಗಂಟೆಯಲ್ಲಿ 508 ಕಿ.ಮೀ ಸಂಚರಿಸಲಿದೆ.

Comments are closed.

Exit mobile version