Wednesday, December 18
Share News

ಚಾರ್ವಾಕ ಗ್ರಾಮದ ದೇವಿನಗರ ನಿವಾಸಿ ದೇಜಪ್ಪ ಯಾನೆ ದಿವೀಶ್ ಮಡಿವಾಳ (45 ವ.) ಎಂಬವರು ಡಿ.16ರಂದು ಹೃದಯಾಘಾತದಿಂದ ನಿಧನರಾದರು.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೃತರು ಪುತ್ತೂರಿನ ಸಂಪ್ಯದಲ್ಲಿ ಮನೆ ಮಾಡಿದ್ದರು. ಚಾರ್ವಾಕದ ಮೂಲ ಮನೆಯಲ್ಲಿ ದೈವಗಳ ಕಾರ್ಯಕ್ರಮದ ನಿಮಿತ್ತ ಅಲ್ಲಿಗೆ ಬಂದವರು ನಿನ್ನೆ ರಾತ್ರಿಯೇ ಪುತ್ತೂರಿಗೆ ಬಂದಿದ್ದರು.

ಬೆಳಗ್ಗಿನ ಜಾವ ಹೃದಯಾಘಾತವಾದ ತಕ್ಷಣ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಡಿ.28ರಂದು ವಿದೇಶಕ್ಕೆ ಹೋಗುವವರಿದ್ದರು.

ಮೃತರು ತಂದೆ, ಪತ್ನಿ, ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.


Share News

Comments are closed.

Exit mobile version