ಪುತ್ತೂರು: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯವಿರುವ ರತನ್ ಸಿಂಗ್ರವರ ಪುತ್ರ ಲೋಕೇಂದರ್ ಸಿಂಗ್(22ವ.) ನಾಪತ್ತೆಯಾದ ಯುವಕ.
ಬಿಬಿಎ ಪದವಿ ಪಡೆದಿರುವ ಲೋಕೇಂದರ್ ಸಿಂಗ್ ಕಳೆದ ಎರಡು ತಿಂಗಳ ಹಿಂದೆ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ. ನ.30ರಂದು ಎಂದಿನಂತೆ ಮನೆಯಲ್ಲಿ ಊಟ ಮಾಡಿ ಟಿವಿ ನೋಡಿಕೊಂಡಿದ್ದ. ಬೆಳಿಗ್ಗೆ ನೋಡುವಾಗ ಆತ ಮನೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾನೆ. ಆತನ ಉಡುಪುಗಳು ತುಂಬಿದ್ದ ಬ್ಯಾಗ್, ದಾಖಲೆ ಪತ್ರಗಳು ಹಾಗೂ ಪಾಸ್ಪೋರ್ಟ್ ಸಹಿತ ಆತ ನಾಪತ್ತೆಯಾಗಿದ್ದಾನೆ.