ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಮಹಾಭಾರತ ಸರಣಿಯಲ್ಲಿ ಮೇ 26ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಅಕ್ಷಯಾಂಬರ ತಾಳಮದ್ದಳೆ ಜರಗಿತು.
ಭಾಗವತರಾಗಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ನಿತೀಶ್ ಕುಮಾರ್ ವೈ, ಹಿಮ್ಮೇಳದಲ್ಲಿ ಪ್ರಚೇತ್ ಆಳ್ವ, ಶ್ರೀಪತಿ ಭಟ್ ಉಪ್ಪಿನಂಗಡಿ ಸಹಕರಿಸಿದರು.
ಅರ್ಥಧಾರಿಗಳಾಗಿ ಅಂಬಾ ಪ್ರಸಾದ ಪಾತಾಳ (ದ್ರೌಪದಿ), ಸತೀಶ ಶಿರ್ಲಾಲು (ಕೌರವ), ಸಂಜೀವ ಪಾರೆಂಕಿ (ವಿದುರ ಮತ್ತು ವಿಕರ್ಣ), ದಿವಾಕರ ಆಚಾರ್ಯ ಗೇರುಕಟ್ಟೆ (ಪ್ರಾತಿಕಾಮಿ, ಭೀಷ್ಮ ಮತ್ತು ಶ್ರೀಕೃಷ್ಣ) ಶ್ರೀಧರ ಎಸ್. ಪಿ ಮಂಗಳೂರು (ದುಶ್ಯಾಸನ ಮತ್ತು ಭೀಮ) ಭಾಗವಹಿಸಿದ್ದರು.
ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.