ಪುತ್ತೂರು: ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ ಮಾತೃಛಾಯಾ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿ ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ.ಸಿ. ಜಿಲ್ಲಾ ಸಮನ್ವಯ ವೇದಿಕೆ ಗೌರವ ಸಲಹೆಗಾರ್ತಿ ಕಸ್ತೂರಿ ಬೊಳುವಾರು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಸಮಾಜದ ವ್ಯವಸ್ಥೆಯಲ್ಲಿ ಶಿಕ್ಷಣದ ವ್ಯವಸ್ಥೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಗುಣಾತ್ಮಕ ಶಿಕ್ಷಣದ ಅನುಷ್ಟಾನದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಣದ ಸಾರ್ವತ್ರೀಕರಣದ ಹೊರತು ಸಾಮಾಜಿಕ ಸಮಾನತೆ ಕಾಣಲು ಸಾಧ್ಯವಾಗಲಾರದು. ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಮಧ್ಯಮ ವರ್ಗ ಮತ್ತು ಕಡುಬಡವರಿಗೊಂದು ಶಿಕ್ಷಣ ವ್ಯವಸ್ಥೆಯಿಂದ ಸಮಾನತೆ ಬೆಳೆಸಲು ಸಾಧ್ಯವಾಗದು..ನಮ್ಮ ಶಿಕ್ಷಣ ಪದ್ದತಿ ಹೇಗಿರಬೇಕು ಮತ್ತು ಅತೀ ಆಶಾದಾಯಕ ವಿಷಯವೇನೆಂದರೆ 2009ರಲ್ಲಿ ಜಾರಿಗೆ ಬಂದಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಮತ್ತು ಸಂವಿಧಾನ ರಚನೆಯಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಬೇಕೆಂದು ಉಲ್ಲೇಖಿಸಿದ್ದರೂ ಕೂಡಾ ಇಂದಿನ ಮಾನವ ಜೀವಿ ತನ್ನ ಬದುಕನ್ನು ಕಟ್ಟಿಕೊಳ್ಳಲು 14 ವರ್ಷ ದವರೆಗೆ ಪಡೆಯುವ ಶಿಕ್ಷಣ ಸಾಕೆ? ಎಂದು ಆಲೋಚಿಸಬೇಕಾಗಿದೆ ಎಂದರು.
ಮಗುವಿನ ಗುಣಾತ್ಮಕ ಕಲಿಕೆಗೆ ಪೂರಕ ವಾತಾವರಣಗಳ ಲಭ್ಯತೆ ಇರಬೇಕಾಗಿದ್ದು ಇದಕ್ಕಾಗಿ ಶಾಲಾ ಕಟ್ಟಡ, ಶಿಕ್ಷಕರ ನೇಮಕಾತಿ, ವಿಷಯವಾರು ಶಿಕ್ಷಕರ ನೇಮಕಾತಿ, ಭಾಷಾವಾರು ಶಿಕ್ಷಕರು, ಅರೆಕಾಲಿಕ ವೃತ್ತಿ ಶಿಕ್ಷಕರ ನೇಮಕಾತಿ, ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಆಟದ ಪರಿಕರಗಳು ಇತ್ಯಾದಿ ಶಿಕ್ಷಣದ ವಿವಿಧ ಪಾಲುದಾರರರ ನಡುವಿನ ಸಮನ್ವಯತೆಯನ್ನು ಬಲಪಡಿಸುವುದು, ಹಾಗೂ ಎಸ್.ಡಿ.ಎಂ.ಸಿ ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕಾದರೆ ಅವುಗಳ ಸಬಲೀಕರಣದ ಅವಶ್ಯಕತೆ ಇರುತ್ತದೆ. ಅಲ್ಲದೇ ಸ್ಥಳೀಯ ಸರಕಾರ ಇಲಾಖೆಗಳು , ಸಂಘಸಂಸ್ತೆಗಳು, ಜನಪ್ತತಿನಿಧಿಗಳು ಇವರುಗಳನ್ನೊಳಗೊಂಡಂತೆ ವಿವಿಧ ಪಾಲುದಾರರೊಡನೆ ಸಮನ್ವಯತೆಯನ್ನು ಬಲಪಡಿಸಬೇಕಾಗಿದೆ. ಅಲ್ಲದೇ ಸಂವಿಧಾನದ ಆಶಯ ಮೌಲ್ಯಗಳಿಗುಣವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸ್ಥಳೀಯ ಜನರು ಭಾಗವಹಿಸುವಂತಾಗಬೇಕು ಎಂದರು.
ಪುತ್ತೂರಿನಲ್ಲಿ ತರಬೇತಿ:
ಈ ಉದ್ದೇಶಕ್ಕಾಗಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ ನಿಟ್ಟನಲ್ಲಿ ಜುಲೈ 4ರಂದು ಪುತ್ತೂರಿನ ಮಾತೃಛಾಯಾ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಆಸಕ್ತ ಸದಸ್ಯರಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ದ.ಕ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರುಮತ್ತು ಮೂಡಬಿದ್ರೆ ಮತ್ತು ಕಡಬ ತಾಲೂಕಿನಿಂದ ಸದಸ್ಯರು ಭಾಗವಹಿಸಲಿದ್ದಾರೆ. ನಂತರದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತ್ತು ಕ್ಲಸ್ಟರ್ ಹಂತದಲ್ಲಿ ತರಬೇತಿಯನ್ನು ನಡೆಸಲಾಗುವುದು ಎಂದರು.
ತರಬೇತಿ ಕಾರ್ಯಾಗಾರದಲ್ಲಿ:
ಈ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸಂಸ್ಥಾಪಕರು ಮತ್ತು ಮಹಾ ಪೋಷಕರು ಹಾಗು ಅಭಿವೃದ್ಧಿ ಶಿಕ್ಷಣ ತಜ್ಷರು ಆದ ಡಾ. ನಿರಂಜನ ಆರಾಧ್ಯ ರವರು, ದಿಕ್ಸೂಚಿ ಭಾ಼ಷಣ ಮಾಡಲಿದ್ದಾರೆ. ಶ್ರೀ. ಉಮೇಶ್ ಜಿ.ಗಂಗಾವಾಡಿ ರಾಜ್ಯಾದ್ಯಕ್ಚರು, ಸಮನ್ವಯ ವೇದಿಕೆ . ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಚಾಲನೆಯನ್ನು ಶ್ರೀಮತಿ ಕಸ್ತೂರಿ ಬೊಳುವಾರು , ದ.ಕ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರು ನೆರೆವೇರಿಸಲಿದ್ದಾರೆ. . ಮುಖ್ಯ ಅಥಿತಿಗಳಾಗಿ . ರೆನ್ನಿ ಡಿಸೋಜಾ , ( ಅಧ್ಯಕ್ಷರು, ದ,ಕ ಜಿಲ್ಲಾ ಮಕ್ಕಳ ಕಲ್ಲಯಣ ಸಮಿತಿ ಮಂಗಳೂರು ಶ್ರೀ. ಲೋಕೇಶ್ (ಕ್ಷೇತ್ರ ಶಿಕ್ಷಣಾಧಿಕಾರಿಗಳು ಪುತ್ತೂರು). ಶ್ರೀಮತಿ. ಪಾರ್ವತಿ (ಪ್ರಧಾನ ಕಾರ್ಯದರ್ಶಿ ರಾಜ್ಯ ಸಮನ್ವಯ ವೇದಿಕೆ.) ಶ್ರಿ ಶಿವಪ್ರಸಾದ ಶೆಟ್ಟಿ , (ಜಿಲ್ಲಾ ಅದ್ಯಕ್ಷರು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು), ಶ್ರಿ ವಿಮಲ್ ಕುಮಾರ್ (ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು) ) ಶ್ರೀಮತಿ ನಯನಾ ರೈ (ಅಧ್ಯಕ್ಷರು ಅಸಹಾಯಕರ ಸೇವಾಟ್ರಸ್ಟ್ ಪುತ್ತೂರು) ಶ್ರೀ.ರಾಮ ಕೃಷ್ಣಮಲ್ಲಾರ್ (ಅದ್ಯಕ್ಷರು ಕಡಬ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು) ಶ್ರೀ ನಾಗೇಶ್ ಪಾಟಾಳಿ( ಅದ್ಯಕ್ಷರು ಪುತೂರು. ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ) ಶ್ರೀ ಮತ್ತು ಶ್ರೀ. ಮಹಮ್ಮದ್ ರಫೀಕ್ , ಅಧ್ಯಕ್ಷರು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಎಂ. ಇಸ್ಮಾಯಿಲ್ ನೆಲ್ಯಾಡಿ, ಉಪಾಧ್ಯಕ್ಷರಾದ ರಾಜೇಶ್ವರಿ ರೈ ಕಾಡುತೋಟ, ಪ್ರವೀಣ್ ಆಚಾರ್ಯ, ಕಾರ್ಯದರ್ಶಿ ಕೃಷ್ಣ ನಾಯ್ಕ್, ಮಾಧ್ಯಮ ಕಾರ್ಯದರ್ಶಿ ಅಜೀಜ್ ಕೆಮ್ಮರ ಉಪಸ್ಥಿತರಿದ್ದರು.