ಪುತ್ತೂರು: ಎಸ್ ಪಿ ವೈ ಎಸ್ ಎಸ್ ಯೋಗ ಸಮಿತಿಯಿಂದ ಶಿವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಯೋಗ ಶಿವನಮಸ್ಕಾರ ಮತ್ತು ಶಿವಷ್ಟೋತ್ತರ ಶತನಾಮಾನಿ ಪಠಣೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ವತಿಯಿಂದ ಮುಂಜಾನೆ 5ರಿಂದ ಆರಂಭವಾದ ಕಾರ್ಯಕ್ರಮ ಬೆಳಗ್ಗೆ 7.30ಕ್ಕೆ ಸಮಾಪನಗೊಂಡಿತು.
ಮುಖ್ಯ ಅತಿಥಿಗಳಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೆಂಕಟೇಶ್ ಸುಬ್ರಹ್ಮಣ್ಯ ಭಟ್, ಜಿಲ್ಲಾ ಲೆಕ್ಕ ಪತ್ರ ಪ್ರಮುಖ್ ಶಿವಪ್ರಸಾದ್, ತಾಲೂಕು ಶಿಕ್ಷಣ ಪ್ರಮುಖ್ ಗಣೇಶ್, ಹಿರಿಯ ಶಿಕ್ಷಕ ಸುರೇಂದ್ರ, ನಗರ ಸಂಘಟನಾ ಪ್ರಮುಖ್ ವೀಣಾ ಇವರು ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆ ಮಾಡಲಾಯಿತು.
ನಂತರ ಭಜನೆ, ಹಾಗೂ 11 ಸುತ್ತಿನ ಏಕಾದಶ ರುದ್ರ ನಮಸ್ಕಾರ ಮತ್ತು ಶಿವಷ್ಟೋತ್ತರ ಶತನಾಮಾನಿ ಪಠಣೆಯ ಮೂಲಕ ಅರ್ಚನೆ ನಡೆಸಲಾಯಿತು.
ಪುತ್ತೂರು ಸೇರಿದಂತೆ ಸುಳ್ಯ, ವಿಟ್ಲದ ಯೋಗ ಬಂಧುಗಳು ಸೇರಿದಂತೆ 413 ಯೋಗ ಬಂದುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಪ್ರಮುಖರಾದ ಲೋಕೇಶ್, ಅನುಪಮಾ ಉಪಸ್ಥಿತರಿದ್ದರು. ಶಿವಷ್ಟೋತ್ತರ ಶತನಾಮಾನಿ ಪಠಣೆಯನ್ನು ಚಂದ್ರಾವತಿ ನಡೆಸಿಕೊಟ್ಟರು.
ಸತೀಶ್ ಪ್ರಾರ್ಥಿಸಿ, ರೀತಾ ಸ್ವಾಗತಿಸಿದರು. ವೀಣಾ ವಂದಿಸಿದರು. ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ತಾಲೂಕು ಸಂಚಾಲಕರಾದ ಯೋಗಿಶ್ ಆಚಾರ್ಯ ಮಾರ್ಗದರ್ಶನದಲ್ಲಿ ಕೃಷ್ಣನಂದಾ, ಸುದೇಶ್, ಸುರೇಂದ್ರ, ಭಗವಾನ್ ದಾಸ್, ಸುಂದರ, ಶ್ರೀಧರ್, ಲಕ್ಷ್ಮೀಕಾಂತ್, ಜನಾರ್ಧನ, ಸಂತೋಷ, ರಾಧಾಕೃಷ್ಣ ಶಾಂತಕುಮಾರ್ , ರಮೇಶ್, ಗೋಪಾಲಕೃಷ್ಣ, ಲಲಿತಾ, ಶಶಿಕಲಾ ಮೊದಲಾದವರು ಸಹಕರಿಸಿದರು.