ಅಮೃತಸರದ ಸ್ವರ್ಣಮಂದಿರದಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಮಂಗಳವಾರ ಸುಖೀರ್ ಸೇರಿದಂತೆ ಇತರೆ ಅಪರಾಧಿಗಳು ಇಲ್ಲಿನ ಪಾತ್ರೆಗಳನ್ನು, ಭಕ್ತಾದಿಗಳ ಪಾದರಕ್ಷೆಗಳನ್ನು ಮತ್ತು ಶೌಚಾಲಯಗಳನ್ನು ಸ್ವಚ್ಛ ಗೊಳಿಸಬೇಕು. ಭಕ್ತಾದಿಗಳಿಗೆ ಲಂಗಾರ್ (ಅನ್ನದಾನ) ಏರ್ಪಡಿಸಬೇಕು. ಅಲ್ಲದೇ ಶಿರೋಮಣಿ ಅಕಾಲಿದಳ (ಎಸ್ಎಡಿ) ಮುಖ್ಯಸ್ಥ ಸ್ಥಾನವನ್ನು ತ್ಯಜಿಸುವಂತೆ ಅವರಿಗೆ ಸೂಚಿಸಲಾಗಿದೆ. ಇದೇ ವೇಳೆ, ಅವರ ತಂದೆ ಪ್ರಕಾಶ್ ಬಾದಲ್ ಅವರಿಗೆ ನೀಡಲಾಗಿದ್ದ “ಅತ್ಯುನ್ನತ ಸಿಖ್ ನಾಯಕ’ ಎಂಬ ಬಿರುದನ್ನು ವಾಪಸ್ ಪಡೆಯಲಾಗಿದೆ.
2007-17ರವರೆಗೆ ಪಂಜಾಬ್ನ ಎಸ್ಎಡಿ ಸರ್ಕಾರವು ಸಿಖ್ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್ ತಖ್ ಆಗಸ್ಟ್ನಲ್ಲಿ ತೀರ್ಪು ಪ್ರಕಟಿಸಿತ್ತು.