ಪುತ್ತೂರು: ಬಲ್ನಾಡು ವಲಯದ ಕುಂಜೂರುಪಂಜ ಕಾರ್ಯಕ್ಷೇತ್ರದ ಮೇಗಿನಪಂಜದಲ್ಲಿ ಯಂತ್ರಶ್ರೀ ಕಾರ್ಯಕ್ರಮದಡಿಯಲ್ಲಿ ರೈತರಿಗೆ ಭತ್ತದ ಬೀಜೋಪಚಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಸಿ.ಎಚ್.ಎಸ್.ಸಿ. ಸುಳ್ಯ ವಿಭಾಗದ ಯೋಜನಾಧಿಕಾರಿ ಮೋಹನ್ ಮಾತನಾಡಿ, ಸರಕಾರದ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೆ ತಂದಿರುವುದು ಧರ್ಮಸ್ಥಳ ಯೋಜನೆ ಮಾತ್ರ ಎಂದರೂ ತಪ್ಪಾಗದು. ಯಂತ್ರಶ್ರೀ ಜಾರಿಗೆ ತಂದ ಬಳಿಕ ಬೇಸಾಯವೂ ಹೆಚ್ಚಾಗುತ್ತಿದೆ. ಈ ಯೋಜನೆ ಜಾರಿಯಾಗುವಾಗ ಹಲವಾರು ಸಂದೇಹಗಳು ರೈತರಲ್ಲಿತ್ತು. ಆದರೆ ಇವನ್ನೆಲ್ಲಾ ಮೀರಿ ರೈತರು ಯಂತ್ರಶ್ರೀಯತ್ತ ಒಲವು ತೋರಿಸಿದ್ದಾರೆ. ಇಂದು ಕೃಷಿ ಯಂತ್ರಗಳಿಗೆಂದೇ ಬ್ಯಾಂಕ್’ಗಳನ್ನು ತೆರೆಯಲಾಗಿದೆ ಎಂದರು.
ಬತ್ತದ ಬೀಜೋಪಚಾರದ ಪ್ರಾತ್ಯಕ್ಷಿಕೆಯನ್ನು ನಾಟಿ ಯಂತ್ರ ಬ್ಯಾಂಕ್ ಮೇಲ್ವಿಚಾರಕ ಉಮೇಶ್ ನಡೆಸಿಕೊಟ್ಟರು.
ಕುಂಜೂರುಪಂಜ ಒಕ್ಕೂಟದ ಅಧ್ಯಕ್ಷ ಮಹಾಲಿಂಗ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಗಣೇಶ್ ಎನ್. ಕಲ್ಲರ್ಪೆ, ಮನೆಯ ಹಿರಿಯರಾದ ಲಿಂಗಮ್ಮ, ಕೃಷಿ ಯಂತ್ರಧಾರೆ ಮ್ಯಾನೇಜರ್ ಸಂಜಯ್, ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ಶಿವರಂಜನ್, ಬಲ್ನಾಡು ವಲಯ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಜೆ., ಸೇವಾಪ್ರತಿನಿಧಿ ಆಶಾ, ಉಪಸ್ಥಿತರಿದ್ದರು.
ಸಭೆಯಲ್ಲಿ ಒಕ್ಕೂಟದ ಉಪಾಧ್ಯಕ್ಷೆ ಉಮಾವತಿ, ಒಕ್ಕೂಟದ ಮಾಜಿ ಅಧ್ಯಕ್ಷರಾದ ನಾರಾಯಣ ಮೂಲ್ಯ, ನಾರಾಯಣ ನಾಯ್ಕ, ಶೌರ್ಯ ವಿಪತ್ತು ಘಟಕದ ಸದಸ್ಯರಾದ ವಿನಯ ನಾಯ್ಕ, ರೋಶನ್ ಡಿಸೋಜಾ, ಹರೀಶ್, ಕಾರ್ತಿಕ್, ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ರೈತರು, ಒಕ್ಕೂಟ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಮೇಗಿನಪಂಜ ಜಗದೀಶ್ ಗೌಡ ಅವರ ಮನೆಯಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಬೀಜೋಪಚಾರದ ಬಗ್ಗೆ ಮಾಹಿತಿ ನೀಡಲಾಯಿತು.