ಪುತ್ತೂರು : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನ.30ರಂದು ಒಂದು ದಿನದ ಲಕ್ಷದೀಪೋತ್ಸವ ನಡೆಯಲಿದೆ.
ದೀಪಾವಳಿಯಂದು ಬಲಿ ಪ್ರಾರಂಭವಾಗಿ ಹಸ್ತಾ ನಕ್ಷತ್ರ ಒದಗುವ ದಿನ ಪೂಕರೆ ಉತ್ಸವದ ಬಳಿಕ ಪ್ರತಿ ಸೋಮವಾರ ರಾತ್ರಿ ಉತ್ಸವ ಬಲಿಯಲ್ಲಿ ಉಡಿಕೆ, ಚೆಂಡೆ ಸುತ್ತು, ವಾರ್ಷಿಕ ಎಲ್ಲಾ ದೊಡ್ಡ ಉತ್ಸವಗಳು ಆರಂಭವಾಗಲಿದೆ.
ಕಾರ್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ಒಂದು ದಿನದ ಜಾತ್ರೆ ಲಕ್ಷ ದೀಪೋತ್ಸವ ನಡೆಯುತ್ತದೆ. ಅಂದು ದೇವರ ಪೂಜೆ ಬಳಿಕ ದೇವರ ಬಲಿ ಹೊರಟು ದೇವರ ಒಳಾಂಗಣ ಮತ್ತು ಹೊರಾಂಗಣದಲ್ಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ ನಡೆಯಲಿದೆ.