ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಜೋದ್ಪುರದಲ್ಲಿ ಸಂಭವಿಸಿದೆ.
ಮೃತಪಟ್ಟವರು ಜೋದ್ಪುರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಅನಿತಾ ಚೌಧರಿ (50) ಎಂದು ತಿಳಿಯಲಾಗಿದೆ.
ಅಕ್ಟೋಬರ್ 27 ರಂದು ಬ್ಯೂಟಿ ಪಾರ್ಲರ್ ಗೆ ಹೋಗಿದ್ದ ಅನಿತಾ ಮಧ್ಯಾಹ್ನ 2:30 ರ ಸುಮಾರಿಗೆ ಸಲೂನ್ ಬಾಗಿಲು ಹಾಕಿ ನಾಪತ್ತೆಯಾಗಿದ್ದರು. ರಾತ್ರಿಯಾದರೂ ಅನಿತಾ ಮನೆಗೆ ಬಾರದೇ ಇದ್ದುದರಿಂದ ಗಾಬರಿಗೊಂಡ ಪತಿ ಮನಮೋಹನ್ ಚೌಧರಿ ಪೊಲೀಸರಿಗೆ ನಾಪತ್ತೆ ದೂರು ನೀಡಿದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಮೊಬೈಲ್ ಲೊಕೇಶನ್, ಕಾಲ್ ಡೀಟೇಲ್ ಪರಿಶೀಲನೆ ನಡೆಸಿದ ವೇಳೆ ಅನಿತಾ ಅವರ ಸ್ನೇಹಿತನಾಗಿದ್ದ ಗುಲ್ ಮೊಹಮ್ಮದ್ ಕರೆ ಕೊನೆಯದಾಗಿತ್ತು ಇದರ ಆಧಾರದ ಮೇಲೆ ಪೊಲೀಸರು ಮೊಹಮ್ಮದ್ ಅವರ ನಿವಾಸಕ್ಕೆ ತೆರಳಿದಾಗ ಮೊಹಮ್ಮದ್ ಮನೆಯಲ್ಲಿ ಇರಲಿಲ್ಲ ಬಳಿಕ ಆತನ ಪತ್ನಿಯನ್ನು ಠಾಣೆಗೆ ಕರೆದುಕೊಂಡು ವಿಚಾರಣೆ ನಡೆಸಿದ ವೇಳೆ ತನ್ನ ಮನೆಯ ಆವರಣದಲ್ಲೇ ದೇಹವನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಹೂಳಲಾಗಿತ್ತು ಎಂದು ತಿಳಸಿದ್ದಾರೆ. ಬಳಿಕ ಪೊಲೀಸರು ಮೊಹಮ್ಮದ್ ನಿವಾಸದ ಬಳಿ ತೆರಳಿ ಹೂತಿದ್ದ ದೇಹವನ್ನು ಹೊರತೆಗೆದಾಗ ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯ ತುಂಡರಿಸಿದ ದೇಹದ ಭಾಗಗಳು ಪತ್ತೆಯಾಗಿವೆ.