ದ. ಕ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಸಂಘದ ಸಭೆ ಪುತ್ತೂರಿನ ಮಾತೃಛಾಯಾ ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಿ.ಐತಪ್ಪ ನಾಯ್ಕ್ ಅಧ್ಯಕ್ಷತೆಯಲ್ಲಿ ಜರಗಿತು.
ಬೆಂಗಳೂರಿನ ಕೇಂದ್ರ ಸಂಘದ ಸಭೆಯ ಈವರೆಗಿನ ಬೆಳವಣಿಗೆಗಳನ್ನು ಕಾರ್ಯದರ್ಶಿ ರಮೇಶ್. ರಾಯಿ ಅವರು ವಿವರಿಸಿದರು.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ಎಲ್ಲಾ ಸಭೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪರವಾಗಿ ಭಾಗವಹಿಸಿದ ರಮೇಶ್ ರಾಯಿ ಅವರನ್ನು ಸನ್ಮಾನಿಸಲಾಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಂಗಾಧರ ಆರ್ ಕೆ ಮಾತನಾಡಿ, ಸದಸ್ಯರಿಂದ ಯಾವುದೇ ಧನಸಂಗ್ರಹ ಮಾಡದೆ ಸಿಗುವ ಸವಲತ್ತುಗಳ ಬಗ್ಗೆ ಪ್ರಯತ್ನ ಮಾಡಿದ ಅಧ್ಯಕ್ಷ ಮತ್ತು ಕಾರ್ಯದರ್ಶಿಯವರಿಗೆ ಅಭಿನಂದನೆ ಸಲ್ಲಿಸಿದರು.
ಸದಸ್ಯರ ಒಮ್ಮತದಿಂದ ರಾಜ್ಯಕ್ಕೆ ನಾವು ಮಾದರಿಯಾಗಿದ್ದೇವೆ. ಸಂಘಟನೆಯನ್ನು ಬೆಳೆಸಿ ಅರ್ಥಪೂರ್ಣವಾದ ಚಟುವಟಿಕೆಗಳನ್ನು ನಡೆಸೋಣವೆಂದು ಅಧ್ಯಕ್ಷರಾದ ಐತಪ್ಪ ನಾಯ್ಕ್ ತಿಳಿಸಿದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಕಮಲಾಕ್ಷಿ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ. ಸಿ ಪಾಟಾಳಿ ಪಡುಮಲೆಯವರ ತೀವ್ರ ಅನಾರೋಗ್ಯ ಮತ್ತು ಶಿಕ್ಷಕರಾಗಿರುವ ಅವರ ಪುತ್ರ ಎರಡು ಕಾಲುಗಳನ್ನು ಕಳೆದುಕೊಂಡು ಕಷ್ಟದಲ್ಲಿರುವುದನ್ನು ಪರಿಗಣಿಸಿ ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರಿಂದ ಸಂಗ್ರಹವಾದ 20,000 ರೂಪಾಯಿಯನ್ನು ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ನೀಡುವುದಾಗಿ ನಿರ್ಧರಿಸಲಾಯಿತು.
ಸಭೆಯಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಅಬ್ರಹಾಂ ವರ್ಗಿಸ್, ದಿವಾಕರ ಆಚಾರ್ಯ ಗೇರುಕಟ್ಟೆ, ಕೆ ಸರೋಜಿನಿ, ದಯಾನಂದ ರೈ. ಕೆ, ಸಂಜೀವ. ಹೆಚ್, ವಾಸುದೇವ ನಡ್ಕ, ಪುರುಷೋತ್ತಮ ಎಂ ಎಸ್, ರಮೇಶ ಎಂ ಬಾಯಾರು, ಶಾರದಾ ಎಸ್ ರಾವ್, ಜಾಯ್ಸ್ ಹೆನ್ರಿಟ, ಚಂದ್ರಾವತಿ ರೈ ಉಪಸ್ಥಿತರಿದ್ದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀಧರ್ ರೈ ಕಾರ್ಯಕ್ರಮ ನಿರ್ವಹಿಸಿದರು.