ಭೂಕುಸಿತ ಸಂಭವಿಸಿದ ಶಾಂತಿನಗರ ನಿವಾಸಿ ವಿಶ್ವನಾಥ ನಾಯ್ಕರ ಮನೆಗೆ ಕೊಂಬೆಟ್ಟು ಮರಾಟಿ ಯುವ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಭೇಟಿ ನೀಡಿ ಅವಘಡದ ಗಂಭೀರತೆಯನ್ನು ಪರಿಶೀಲಿಸಿದರು
ಬೇರೆ ಜಾಗದಲ್ಲಿ ಅವರಿಗೆ ಬೇಕರಿ ಉತ್ಪನ್ನಗಳನ್ನು ತಯಾರಿಸಲು ತಾತ್ಕಾಲಿಕವಾಗಿ ಶೆಡ್ ನಿರ್ಮಾಣಕ್ಕೆ ಯುವ ವೇದಿಕೆಯ ವತಿಯಿಂದ ಶ್ರಮದಾನ ಮೂಲಕ ಸಹಕರಿಸುವುದಾಗಿ ಇದೇ ಸಂದರ್ಭ ಭರವಸೆ ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ನಾಯ್ಕ್ ಕೌಡಿಚ್ಚಾರು, ಸ್ಥಾಪಕಾಧ್ಯಕ್ಷ ಗಿರೀಶ್ ನಾಯ್ಕ ಸೊರಕೆ, ಮಾಜಿ ಅಧ್ಯಕ್ಷರುಗಳಾದ ಅಶೋಕ್ ನಾಯ್ಕ್ ಸೊರಕೆ, ವೆಂಕಪ್ಪ ಬರೆಪ್ಪಾಡಿ, ಸಂದೀಪ್ ಆರ್ಯಾಪು, ಕೋಶಾಧಿಕಾರಿ ನವೀನ್ ಕುಮಾರ್ ಕೆ, ಕ್ರೀಡಾ ಕಾರ್ಯದರ್ಶಿ ಜಗದೀಶ್ ಎಲಿಕ, ಸದಸ್ಯರಾದ ವಿಜಯ ಮಠಂತಬೆಟ್ಟು, ಸ್ಥಳೀಯರಾದ ಮೈರ ನಿವಾಸಿ ನವೀನ್ ಉಪಸ್ಥಿತರಿದ್ದರು.