ಭಯಾನಕ ಭೂಕುಸಿತಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿದೆ. ಮಂಗಳವಾರ ಮುಂಜಾನೆ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲಾ ಮತ್ತು ನೂಲ್ಪುಝಾ ಗ್ರಾಮದಲ್ಲಿ ಭೂಕುಸಿತ ಆಗಿದೆ.
ಒಟ್ಟು ಮೂರು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಭಾರೀ ಸಾವು ನೋವು ಸಂಭವಿಸಿದೆ. ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿದೆ. ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಹೆಣಗಳು ತೇಲಿ ಬರುತ್ತಿವೆ.ದೇವರ ನಾಡು ರಕ್ಕಸ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳನ್ನು ತೊಯ್ದುಬಿಟ್ಟಿವೆ. ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ.ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಮೃತದೇಹಗಳು ನದಿಯಲ್ಲಿ ತೇಲಿ ಹೋಗುತ್ತಿವೆ. 200ಹೆಚ್ಚು ಮನೆಗಳು ಭೂ ಕುಸಿತಕ್ಕೆ ಹಾನಿಯಾಗಿವೆ.