ಪುಣೆ: ನ್ಯೂಝಿಲೆಂಡ್ ತನ್ನ ಮೊದಲ ಟೆಸ್ಟ್ ಸರಣಿಯನ್ನು ಭಾರತದಲ್ಲಿ ಗೆದ್ದುಕೊಂಡಿದ್ದು, 12 ವರ್ಷಗಳ ಬಳಿಕ ಭಾರತ ತಂಡ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋತಿದೆ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಝಿಲ್ಯಾಂಡ್ ತಂಡವು ಭಾರತಕ್ಕೆ 359ರನ್ ಗುರಿ ನೀಡಿತ್ತು. ಆದರೆ ಭಾರತ 245ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ 113ರನ್ ಗಳ ಅಂತರದಿಂದ ಭಾರತದ ನೆಲದಲ್ಲಿ ನ್ಯೂಝಿಲ್ಯಾಂಡ್ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.
ಹೊಸದಾಗಿ ನೇಮಕಗೊಂಡ ನಾಯಕ ಟಾಮ್ ಲ್ಯಾಥಮ್ ನೇತೃತ್ವದ ನ್ಯೂಝಿಲ್ಯಾಂಡ್ ತಂಡವು ಅದ್ಭುತ ಪ್ರದರ್ಶನವನ್ನು ನೀಡಿದೆ. ಭಾರತದ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ ತಕ್ಕಮಟ್ಟಿನ ಪ್ರದರ್ಶನ ನೀಡಿದ್ದಾರೆ. ಜೈಸ್ವಾಲ್ 65 ಎಸೆತಗಳಲ್ಲಿ 77 ರನ್ ಗಳಿಸಿದ್ದು, ಜಡೇಜಾ 42 ರನ್ ಗಳಿಸಿದ್ದಾರೆ.
ಭಾರತ ತವರಿನಲ್ಲಿ 2012-13ರಲ್ಲಿ ಕೊನೆಯ ಭಾರಿಗೆ ಸರಣಿ ಕಳೆದುಕೊಂಡಿತ್ತು, ಅನಂತರ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದು ದಾಖಲೆ ಬರೆದಿತ್ತು.