ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಲೆಕ್ಷನ್ ಗೆದ್ದು ಸಂಭ್ರಮದಲ್ಲಿದ್ದಾರೆ. ಈ ನಡುವೆ ಟ್ರಂಪ್ ನಿವಾಸಕ್ಕೆ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಟ್ರಂಪ್ ಅವರ ಮಾರ್ ಎ ಲಾಗೋ ನಿವಾಸದಲ್ಲಿ ಹೈ ಸೆಕ್ಯೂರಿಟಿ ನಿಯೋಜಿಸಲಾಗಿದೆ. ಶಸ್ತ್ರಸಜ್ಜಿತ ಕಮಾಂಡೋಸ್ ಜತೆಗೆ ರೊಬೋಟಿಕ್ ನಾಯಿ ಕಣ್ಣಾವಲು ಸೆಕ್ಯೂರಿಟಿಯನ್ನ ಮತ್ತಷ್ಟು ಬಿಗಿಗೊಳಿಸಿದೆ.
ನೂತನ ತಂತ್ರಜ್ಞಾನದ ರೊಬೋಟಿಕ್ ನಾಯಿ ತನ್ನ ವಿಶಿಷ್ಟ ಕೌಶಲ್ಯದ ಮೂಲಕ ಯಾವುದೇ ದಾಳಿ ಮುನ್ಸೂಚನೆ ಗುರುತಿಸಬಹುದಾಗಿದೆ. ಹೈಲೆವೆಲ್ ಪ್ಯಾಟ್ರೋಲಿಂಗ್ ಗೆ ಇದು ಸಹಕಾರಿಯಾಗಲಿದೆ.
ಡೊನಾಲ್ಡ್ ಟ್ರಂಪ್ ದಿಗ್ವಿಜಯದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅವರ ಮೇಲೆ ಮಾರಣಾಂತಿಕ ದಾಳಿ ಆಗುವ ಭೀತಿ ಇದೆ.ಹೀಗಾಗಿ ಸೆಕ್ಯೂರಿಟಿ ಫುಲ್ ಟೈಟ್ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ರೊಬೋಟಿಕ್ ನಾಯಿ ಮನೆ ಮುಂದಿನ ಗಸ್ತಿನ ಹೊಣೆಹೊತ್ತಿದೆ.