ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ತೂರು ಆದರ್ಶ ಆಸ್ಪತ್ರೆ ಬಳಿ ನಿವಾಸಿ ಗುರುಪ್ರಸಾದ್ ದೇವಾಡಿಗ (45) ಅವರು ಇಂದು ನಿಧನರಾಗಿದ್ದಾರೆ.
ಮೃತರಿಗೆ 8 ತಿಂಗಳ ಹಿಂದೆ ಶ್ವಾಸಕೋಶದ ತೊಂದರೆಗೆ ಒಳಗಾಗಿದ್ದರು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಿರಲಿಲ್ಲ.
ಪುತ್ತೂರಿನ ವಿವಿಧ ಬೇಕರಿಗಳಲ್ಲಿ ಕೆಲಸ ಮಾಡಿದ ಅವರು ಬಳಿಕ ಮನೆ ಸಮೀಪವೇ ಹೊಟೇಲ್ ಒಂದನ್ನು ತೆರೆದಿದ್ದರು. ಪ್ರಸ್ತುತ ಅವರು ವಿವಿಧ ಉತ್ಪನ್ನಗಳ ಲೈನ್ ಸೇಲ್ ಕೆಲಸ ಮಾಡುತ್ತಿದ್ದರು.
ಮೃತರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ.