ಪುತ್ತೂರು: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ (ಐ) ಪುತ್ತೂರು ಸೆಂಟರ್ ವತಿಯಿಂದ ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ರಾಮ್ಕೋ ಸಿಮೆಂಟ್ ಅರ್ಪಿಸುವ ಇಂಜಿನೀಯರ್ಸ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಮೂಲ್ಕಿ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಫೈನಲ್ ಪಂದ್ಯದಲ್ಲಿ ಉಡುಪಿ ಹಾಗೂ ಮೂಲ್ಕಿ ತಂಡಗಳ ನಡುವೆ ನೇರಾ ನೇರ ಹಣಾಹಣಿ ಏರ್ಪಟ್ಟಿತ್ತು. ಎದುರಾಳಿಯನ್ನು ಸಮರ್ಥವಾಗಿ ಎದುರಿಸಿದ ಮೂಲ್ಕಿ ತಂಡ, ಉಡುಪಿ ತಂಡವನ್ನು ಕಟ್ಟಿ ಹಾಕಲು ಎಲ್ಲಾ ಪ್ರಯತ್ನ ನಡೆಸಿತು. ಕೊನೆಗೆ 7 ರನ್ ಗಳ ಗುರಿಯಷ್ಟೇ ಉಡುಪಿಗಿತ್ತು. ಮೂಲ್ಕಿ ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲಿ ಉಡುಪಿ ತಂಡ 1 ರನ್ ಗಳಿಗೆ ಜಯ ತನ್ನದಾಗಿಸಿತು. ರೋಚಕ ಪಂದ್ಯದಲ್ಲಿ ಮೂಲ್ಕಿ ಇಂಜಿನೀಯರ್ಸ್ ತಂಡ ರನ್ನರ್ಸ್ ಗೆ ತೃಪ್ತಿ ಪಟ್ಟುಕೊಂಡಿತು.