ಮೊಬೈಲ್ ಬಿಟ್ಟು ಅರೆಕ್ಷಣ ಇರಲು ಸಾಧ್ಯವೇ? ಇಲ್ಲಪ್ಪ. ರಾತ್ರಿ ಮಲಗಿದರೂ, ಎಚ್ಚರವಾದಾಗ ಮೊಬೈಲ್ ನೋಡಲೇಬೇಕು. ಹಾಗಿರುವಾಗ 1.5 ಗಂಟೆ ಮೊಬೈಲ್ ಸೈಲೆಂಟ್ (Digital detox) ಆಗೋದಾ? ಅಲ್ಲ ಮಾಡೋದು. ಅದು ಹೇಗೆ ಸಾಧ್ಯ?
ಮಹಾರಾಷ್ಟ್ರದ ಸಾಂಗ್ಲಿಯ (Sangli in maharashtra) ಒಂದು ಗ್ರಾಮ. ಈ ಊರಿನಲ್ಲಿ ಪ್ರತಿ ದಿನ ಸಂಜೆ 7.30 ಕ್ಕೆ ಪಕ್ಕದ ದೇವಸ್ಥಾನದಲ್ಲಿ ಸೈರನ್ ಮೊಳಗುತ್ತದೆ. ಆಗ ಎಲ್ಲರೂ ಮೊಬೈಲ್ ದೂರ ಇಡುತ್ತಾರೆ. ಮೊಬೈಲ್ ಮಾತ್ರವಲ್ಲ, ಟಿವಿ ಸೇರಿದಂತೆ ಎಲ್ಲಾ ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಿಗೆ ಒಂದೂವರೆ ತಾಸು ವಿರಾಮ.ಬಳಿಕ ಅದು ಜೀವಂತವಾಗುವುದು ರಾತ್ರಿ 8.30ರ ಬಳಿಕ.
ಮಕ್ಕಳು, ಯುವಕರು, ಹಿರಿಯರು ಪುಸ್ತಕ ಓದುವುದು, ಹೊಸ ವಿಷಯಗಳ ಕುರಿತು ಮಾತನಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ತಮಗಾಗಿ ಸಮಯ ಮೀಸಲಿಡುತ್ತಾರೆ.
ಕೊರೋನಾದ ಬಳಿಕ ಮಕ್ಕಳು ಹೆಚ್ಚಾಗಿ ಮೊಬೈಲ್ ನ ಒಳಗೆ ಇರುವುದನ್ನು ತಪ್ಪಿಸಲು ಈ ನೂತನ ಯೋಚನೆ. ಊರವರ ಸಹಕಾರದಿಂದ ಚೆನ್ನಾಗಿ ಅನುಷ್ಠಾನವಾಗುತ್ತಿದೆ ಎನ್ನುತ್ತಾರೆ ಗ್ರಾಮ ಸರ್’ಪಂಚ್ ವಿಜಯ್ ಮೊಯ್ತೆ.
ಮಾನವ ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ವಾಸ್ತವಿಕತೆಯಿಂದ ದೂರ ಆಗದಂತೆ ತಡೆಯುವುದೇ ಡಿಜಿಟಲ್ ಡಿಟಾಕ್ಸ್ (ಡಿಜಿಟಲ್ ಮುಕ್ತ) ಉದ್ದೇಶ ಎಂದು ಹೇಳಲಾಗಿದೆ.