ಬೆಂಗಳೂರು: ಸಚಿವ ಸಂಪುಟ ಸಹಿತ KPCC ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್ ಮುಂದಾಗಿದೆ ಎಂಬ ರಾಜಕೀಯ ವಿಶ್ಲೇಷಣೆ ಕೇಳಿಬಂದಿದೆ.
ಮುಡಾ ಹಗರಣದಲ್ಲಿ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆದಿದ್ದು, ಪ್ರಮುಖ ವಿಚಾರಗಳನ್ನು ಚರ್ಚಿಸಲಾಯಿತು.
ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಬೆಂಬಲ ನೀಡಿದ್ದು, ಹೋರಾಟಕ್ಕೆ ನಿರ್ಧರಿಸಿದೆ. ಇದರ ನಡುವೆ ಸಿಎಂ ಹುದ್ದೆ ಬದಲಾವಣೆ ಮಾಡುವುದಾರೆ ಮುಂದಿನ ಸಿಎಂ ಆಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಬಗ್ಗೆಯೂ ಮಾತುಕತೆ ನಡೆದಿರುವುದಾಗಿ ತಿಳಿದುಬಂದಿದೆ.
ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುವ ಕುರಿತು ಮಾತುಕತೆ ನಡೆಯಿತು ಎನ್ನಲಾಗಿದೆ. ಬದಲಾಯಿಸಿದರೆ ಡಿ.ಕೆ. ಶಿವಕುಮಾರ್ ಸ್ಥಾನ ತುಂಬುವವರ್ಯಾರು ಎಂಬ ಪ್ರಶ್ನೆ ಹೈಕಮಾಂಡ್ ಮುಂದಿದೆ.
ಇದರ ಜೊತೆಗೆ ಸಚಿವ ಸಂಪುಟದ ನಾಲ್ಕೈದು ಸಚಿವರನ್ನು ಬದಲಾಯಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.