ಬಲೂನ್ ಊದುವ ವೇಳೆ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.
ನವೀನ್ ನಾರಾಯಣ್ ಬೆಳಗಾಂಷ್ಕರ್ (13) ಮೃತಪಟ್ಟ ಬಾಲಕ. ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾರಾಯಣ್ ಬೆಳಗಾಂಲ್ಕರ್ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಬಲೂನ್ ಊದುವಾಗ ಒಮ್ಮೆಲೇ ಗಂಟಲಲ್ಲಿ ಸಿಲುಕಿ ಈ ದುರಂತ ಸಂಭವಿಸಿದೆ. ಉಸಿರು ತೆಗೆದುಕೊಳ್ಳುತ್ತಿರುವಾಗಲೇ ಗಂಟಲಲ್ಲಿ ಬಲೂನ್ ಸಿಲುಕಿದೆ. ಉಸಿರುಗಟ್ಟಿ ನಾರಾಯಣ್ ಮೃತಪಟ್ಟ ಎಂದು ಶಾಲೆಯ ಶಿಕ್ಷಕರು ತಿಳಿಸಿದ್ದಾರೆ.