ಪುತ್ತೂರು: ಪೆಟ್ರೋಲ್, ಡೀಸಿಲ್ ಬೆಲೆ ಏರಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಪುತ್ತೂರು ಬಿಜೆಪಿ ನಾಯಕರು ರಸ್ತೆ ತಡೆದು, ಪ್ರತಿಭಟನೆ ನಡೆಸಿದರು.ಗುರುವಾರ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ಪ್ರಮುಖರು, ಗಾಂಧಿಕಟ್ಟೆ ಬಳಿ ರಸ್ತೆ ತಡೆ ನಡೆಸಿದರು.ಪೊಲೀಸರು ಬಂದು ರಸ್ತೆ ತಡೆ ಮಾಡದಂತೆ ಮನವಿ ಮಾಡಿ ರಸ್ತೆಯಲ್ಲಿ ಕುಳಿತ ಪ್ರಮುಖರು, ಕಾರ್ಯಕರ್ತರನ್ನು ಎಬ್ಬಿಸುವ ಪ್ರಯತ್ನ ಮಾಡಿದರು. ಕೊನೆಗೆ ಪ್ರತಿಭಟನಾಕಾರರು ಕೋರ್ಟ್ ರಸ್ತೆಯ ಮೂಲಕ ತಾಲೂಕು ಆಡಳಿತ ಸೌಧದ ಮುಂದೆ ತಹಸೀಲ್ದಾರ್ ಕಚೇರಿ ಮೂಲಕ ಸರಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆಯ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಬೈಸಿಕಲ್ ಸವಾರಿ ಗಮನ ಸೆಳೆಯಿತು.ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಅವರು ಮಾತನಾಡಿದರು.ಆಡಳಿತ ಸೌಧದ ಮುಂಭಾಗ ಮಾಜಿ ಶಾಸಕ ಸಂಜೀವ ಮಠಂದರೂರು ಮಾತನಾಡಿದರು.ನಗರ ಮಂಡಲದ ಅಧ್ಯಕ್ಷ ಪಿ.ಜಿ ಜಗನ್ನಿವಾಸ ರಾವ್ ಮನವಿ ಪತ್ರವನ್ನು ಮಂಡಿಸಿದರು.ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಮೊದಲಾದವರು ಪ್ರಮುಖರು ಕಾರ್ಯಕರ್ತರು ಭಾಗವಹಿಸಿದರು.
Thursday, November 21
Trending
- ಖ್ಯಾತ ಮಲಯಾಳಂ ಸಿನಿಮಾ ನಟ ಮೇಘನಾಥನ್ ನಿಧನ
- ಕಡಬ: ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕ: ಓರ್ವ ಆಸ್ಪತ್ರೆಗೆ ದಾಖಲು!!
- ಪುತ್ತೂರು ಕಾಂಗ್ರೆಸ್ ಕಚೇರಿಗೆ ಸರಕಾರಿ ಆಸ್ಪತ್ರೆಯ ಜಾಗ?? ಕಾಂಗ್ರೆಸ್ ಕಚೇರಿಗೆ ವ್ಯಾಲ್ಯೂವೇಬಲ್ ಜಾಗ ನೀಡುವ ಭರವಸೆ ನೀಡಿದ್ದ ಶಾಸಕರು!! ಸರಕಾರಿ ಜಾಗ ಕಬಳಿಕೆ ಬೆಳಕಿಗೆ ಬಂದಿದೆ ಎಂದ ಮಾಜಿ ಶಾಸಕ!
- ಕನ್ಯಾನ: ಮನೆಯಲ್ಲಿ ಮೌರಿಸ್ ಡಿಸೋಜಾರವರ ಶವ ಪತ್ತೆ!!
- ಪುತ್ತೂರು: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು.!!
- ಮಂಗಳೂರು: ನೋಂದಾವಣಿ ಕಚೇರಿಯಲ್ಲಿ ಆಗುವ ತೊಂದರೆ ಸರಿಪಡಿಸುವಂತೆ ಮನವಿ..!
- ಸರಕಾರಿ ಆಸ್ಪತ್ರೆಗೂ ತಟ್ಟಿದ ಬೆಲೆ ಏರಿಕೆ ಬಿಸಿ!! ಆಸ್ಪತ್ರೆಯ OPD, IPD ಶುಲ್ಕ ಹೆಚ್ಚಳ??
- ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾರ್ಷಿಕ ಧ್ಯಾನ ಕೂಟ