ಬೆಂಗಳೂರು: ಬೆಂಗಳೂರಿನಲ್ಲಿ ಓಲಾ ಹಾಗೂ ಉಬರ್ ನಷ್ಟೇ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಬೈಕ್ಟ್ಯಾಕ್ಸಿ ಸೇವೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಅಧಿಸೂಚನೆಯಲ್ಲಿ, ಬೈಕ್ಗಳಂತಹ ಸಾರಿಗೆಯೇತರ ವಾಹನಗಳನ್ನು ಟ್ಯಾಕ್ಸಿಗಳಂತೆ ಮತ್ತು ಖಾಸಗಿ ಅಪ್ಲಿಕೇಶನ್ಗಳನ್ನು ಅವುಗಳ ಕಾರ್ಯಾಚರಣೆಗೆ ಬಳಸುವುದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದೆ.
ಮಾರ್ಚ್ 6 ರಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪಾ ವಿ.ಎಸ್ ಅವರು ಹೊರಡಿಸಿದ ಅಧಿಸೂಚನೆಯಲ್ಲಿ, ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯು ಅದರ ನಿರ್ವಾಹಕರು ಮತ್ತು ಆಟೋ ಮತ್ತು ಕ್ಯಾಬ್ ಚಾಲಕರು ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳ ಸದಸ್ಯರ ನಡುವೆ ಘರ್ಷಣೆ ಮತ್ತು ಹೊಡೆದಾಟಗಳಿಗೆ ಕಾರಣವಾಯಿತು, ಇದರಿಂದ ದೂರುಗಳು ಮತ್ತು ಪ್ರಕರಣಗಳನ್ನು ದಾಖಲಿಸಲು ಕಾರಣವಾಯಿತು. ಬೈಕ್ ಟ್ಯಾಕ್ಸಿಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಬೈಕ್ ಟ್ಯಾಕ್ಸಿಗಳ ಅಗತ್ಯವನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ನಗರದ ಮೆಟ್ರೊ, ಬಿಎಂಟಿಸಿ ಮತ್ತು ರೈಲು ಬಳಕೆದಾರರಿಗೆ ಬೈಕ್ ಟ್ಯಾಕ್ಸಿ ಹೆಚ್ಚಿನ ಸಹಾಯ ಮಾಡುತ್ತಿಲ್ಲ ಎಂದು ಹೇಳಿದೆ.
ಅಧಿಸೂಚನೆಯಲ್ಲಿ, ಬೈಕ್ ಟ್ಯಾಕ್ಸಿಗಳು ಆದಾಯ ಉತ್ಪಾದನೆಯಲ್ಲಿ ಸ್ವಲ್ಪಮಟ್ಟಿಗೆ ಸಹಾಯ ಮಾಡುತ್ತವೆ. ಆದ್ದರಿಂದ, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಹಿಂತೆಗೆದುಕೊಳ್ಳುವುದಾಗಿ ಸರ್ಕಾರ ಹೇಳಿದೆ. 36 ಖಾಸಗಿ ಸಾರಿಗೆ ಸಂಸ್ಥೆಗಳ ಬೆಂಬಲದೊಂದಿಗೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟವು ಕಳೆದ ವರ್ಷ ಬೆಂಗಳೂರು ಬಂದ್ಗೆ ಕರೆ ನೀಡಿತ್ತು, ಹೀಗಾಗಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು, ಈಗ ಅದನ್ನು ಹಿಂಪಡೆಯಲಾಗಿದೆ.
2021 ರಲ್ಲಿ ಸರ್ಕಾರವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ತಂದರೂ, ವೈಟ್ಬೋರ್ಡ್ ದ್ವಿಚಕ್ರ ವಾಹನಗಳು ಖಾಸಗಿ ಅಪ್ಲಿಕೇಶನ್ಗಳ ಸಹಾಯದಿಂದ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು
ಫೆಡರೇಶನ್ನ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಬೈಕ್ ಟ್ಯಾಕ್ಸಿ ನಿಷೇಧಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ, ಈ ಮೂಲಕ ಸಾರಿಗೆ ಸಂಸ್ಥೆಗಳಿಗೆ ನೀಡಿದ ಭರವಸೆಯನ್ನು ರಾಮಲಿಂಗಾ ರೆಡ್ಡಿ ಉಳಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.