ಸುಳ್ಯ: ಪೈಚಾರು ಸಮೀಪ ಆರ್ತಾಜೆ ಬಳಿ ಎರಡು ಬೈಕ್ಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಸವಾರ ಮೃತಪಟ್ಟ ಘಟನೆ ಸಂಭವಿಸಿದೆ. ಐವರ್ನಾಡಿನ ಪಾಲೆಪ್ಪಾಡಿಯ ಭೋಜಪ್ಪ ಗೌಡ(50) ಮೃತಪಟ್ಟವರು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಬೈಕಿನಲ್ಲಿ ಇದ್ದ ಇಬ್ಬರು ಸವಾರರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Previous Articleಭಾರತೀಯ ಸೇನಾ ನೇಮಕಾತಿ,10+2 ಟೆಕ್ನಿಕಲ್ ಎಂಟ್ರಿ
Next Article ಹೊಲದಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು