ಪುತ್ತೂರು: ಗ್ರಾಹಕರ ಹಕ್ಕಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲು ಅನಿಕೇತನ ಫೋರಂ ಫಾರ್ ಕನ್ಸ್ಯೂಮರ್ ರೈರ್ಟ್ಸ್ ಸಿದ್ಧವಾಗಿದೆ.
ಡಿ. 24ರಿಂದಲೇ ಗ್ರಾಹಕರ ಹಕ್ಕಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ
ಯಾವುದೇ ಸರಕು ಮತ್ತು ಸೇವಾ ನ್ಯೂನತೆ, ಬಳಕೆದಾರರ ಸಮಸ್ಯೆ, ಬಳಕೆದಾರರ ದಾರಿ ತಪ್ಪಿಸುವ ಜಾಹೀರಾತು, ಬಳಕೆದಾರರ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳಲು ಸಹಾಯ ಹೀಗೆ ಹಲವಾರು ವಿಚಾರಗಳಲ್ಲಿ ಅನಿಕೇತನ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ಹಂಚಿಕೊಳ್ಳಲು ಅವಕಾಶವಿದೆ ಎಂದು ಅನಿಕೇತನ ಎಡ್ಯುಕೇಷನ್ ಚಾರಿಟಬಲ್ ಟ್ರಸ್ಟ್ ನ ಅದ್ಯಕ್ಷರು ಮತ್ತು ವಕೀಲರಾದ ಕೃಷ್ಣಪ್ರಸಾದ್ ನಡ್ಸಾರ್ ತಿಳಿಸಿದ್ದಾರೆ.
.