ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಮರ್ಹೂಂ ರಮಳಾನ್ ಅಝ್ಹರಿಯವರ ಕುಟುಂಬಕ್ಕೆ ಕಾಜೂರು ಪೆರ್ದಾಡಿ ನಲ್ಲಿ ಪುನರ್ ನಿರ್ಮಾಣ ಗೊಂಡ ಮನೆ ಕೀ ಹಸ್ತಾಂತರ ನೇತೃತ್ವ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನೆರವೇರಿಸಿದರು.
ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಪಮ್ಮಲೆ ಮಾಡನ್ನೂರು ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಲೆ ಸುಳ್ಯ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಿ ಕೊಟ್ಟ ಇಂಜಿನಿಯರ್ ಮುಹಮ್ಮದ್ ತ್ವಾಹಿರ್ ಬಂಗೇರಕಟ್ಟೆ ಇವರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಉಪಾಧ್ಯಕ್ಷರಾದ ಅಶ್ರಫ್ ಫೈಝಿ ಬೆಳ್ತಂಗಡಿ, SKSBV ಜಿಲ್ಲಾ ಕನ್ವೀನರ್ ಅಶ್ರಫ್ ಹನೀಫಿ ಕರಾಯ, ಮುಹಮ್ಮದಲೀ ದಾರಿಮಿ ಕುಕ್ಕಾಜೆ, SKSSF ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕೌನ್ಸಿಲ್ ಅಬ್ದುಲ್ ರಝಾಕ್ ಮದನಿ ಸುರತ್ಕಲ್ ರೇಂಜ್, ರಫೀಕ್ ದಾರಿಮಿ ಮೂಡುಬಿದ್ರೆ ರೇಂಜ್, ಫಳುಲುದ್ದೀನ್ ಮುಸ್ಲಿಯಾರ್ ಮಂಗಳೂರು ರೇಂಜ್, ನಿಸಾರ್ ಮುಸ್ಲಿಯಾರ್ ಬಂಟ್ವಾಳ ರೇಂಜ್, ಕೆ.ಎಂ. ಸಿದ್ದೀಕ್ ಫೈಝಿ ಕರಾಯ, ಬೆಳ್ತಂಗಡಿ ರೇಂಜ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಶ್ಶಾಫಿ, ಹಮೀದ್ ಫೈಝಿ ಗುರುಪುರ, ಹಾಗೂ ಬೆಳ್ತಂಗಡಿ ರೇಂಜ್ ಅಧ್ಯಾಪಕರು, ಕಾಜೂರು ಪೆರ್ದಾಡಿ ಅಜ್ಮೀರ್ ಖಾಜ ಜುಮಾ ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಊರಿನ ನೇತಾರರು ಬಾಗವಹಿಸಿದರು.