ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಆಶ್ರಯದಲ್ಲಿ 2024-25ನೇ ಸಾಲಿನ ರೋಟರಿ ವಲಯ 5ರ ಒಂದು ದಿನದ ರೈಲಾ ಕಾರ್ಯಕ್ರಮ ಡಿ. 1ರಂದು ಬೆಳಿಗ್ಗೆ 8.30ರಿಂದ ತೆಂಕಿಲ ಒಕ್ಕಲಿಗ ಸಭಾಭವನದ ಚುಂಚಶ್ರೀ ಹವಾನಿಯಂತ್ರಿತ ಸಭಾಭವನದಲ್ಲಿ ನಡೆಯಲಿದೆ.
ಭವಿಷ್ಯದ ಯುವ ನಾಯಕರನ್ನು ರೂಪಿಸುವ ಉದ್ದೇಶವಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿದ್ದು, ಪುತ್ತೂರು, ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ ಭಾಗದ 16ರಿಂದ 30 ವರ್ಷದೊಳಗಿನ ಇಂಟರ್ಯಾಕ್ಟ್, ರೋಟರ್ಯಾಕ್ಟ್, ಕಾಲೇಜು ವಿದ್ಯಾರ್ಥಿಗಳು ಹಾಗೂ ರೋಟರಿ ಕುಟುಂಬದ ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಾಗಾರವನ್ನು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ. ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಲಿದ್ದು, ವಲಯ 5ರ ಸಹಾಯಕ ಗವರ್ನರ್ ಡಾ. ಹರ್ಷ ಕುಮಾರ್ ರೈ, ರೈಲಾದ ಸಲಹೆಗಾರ ವಿಶ್ವಾಸ್ ಶೆಣೈ, ರೈಲಾ ಡಿಸ್ಟ್ರಿಕ್ಟ್ ಛೇರ್ಮೇನ್ ಡಾ. ಪ್ರಕಾಶ್ ಕೆ.ಇ., ವಲಯ ಸೇನಾನಿ ಪಿ. ಮುರಳೀಧರ ರೈ, ರೈಲಾ ಸಂಯೋಜಕ ಶ್ರೀಧರ್ ಆಚಾರ್ಯ ಉಪಸ್ಥಿತರಿರುವರು.
ಬಳಿಕ ನಡೆಯುವ ಕಾರ್ಯಾಗಾರದಲ್ಲಿ ಶೇಖರ್ ಶೆಟ್ಟಿ ಅವರು ಪರ್ಸನಾಲಿಟಿ ಡೆವಲಪ್ಮೆಂಟ್ ಆ್ಯಂಡ್ ಲೀಡರ್ ಶಿಪ್ ಕ್ವಾಲಿಟೀಸ್ ವಿಷಯದಲ್ಲಿ, ಕೃಷ್ಣ ಮೋಹನ್ ಅವರು ಬ್ರಿಂಗ್ ಔಟ್ ದ ಬೆಸ್ಟ್ ಇನ್ ಯೂ ವಿಷಯದಲ್ಲಿ, ಕಸ್ತೂರಿ ಕೆ. ಅವರು ಸೋಶಿಯಲ್ ಇಶ್ಯೂಸ್ ಆ್ಯಂಡ್ ಯೂತ್ ವಿಷಯದಲ್ಲಿ, ಡಾ. ಅನಿಲ ದೀಪಕ್ ಶೆಟ್ಟಿ ಅವರು ಲೈಫ್ ಸ್ಪಾನ್, ಮ್ಯಾನೇಜ್ಮೆಂಟ್ ವಿಷಯದಲ್ಲಿ ಮಾಹಿತಿ ನೀಡಲಿದ್ದಾರೆ. ಶಶಿಧರ್ ರೈ ಅವರು ಮನರಂಜನಾತ್ಮಕ ಹಾಗೂ ಗೇಮ್ಸ್ ನಡೆಸಿಕೊಡಲಿದ್ದಾರೆ.
ಸಂಜೆ 3.30ಕ್ಕೆ ಸಮಾರೋಪ ನಡೆಯಲಿದ್ದು, ವಲಯ 5ರ ಸಹಾಯಕ ಗವರ್ನರ್ ಗಳಾದ ಸೂರ್ಯನಾಥ ಆಳ್ವ, ವಿನಯ ಕುಮಾರ್ ಸಿ., ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗ, ಯೂತ್ ಸರ್ವೀಸ್ ಜಿಲ್ಲಾ ಕಾರ್ಯದರ್ಶಿ ರತ್ನಾಕರ ರೈ, ರೈಲಾ ಡಿಸ್ಟ್ರಿಕ್ಟ್ ಛೇರ್ಮೆನ್ ಡಾ. ಪ್ರಕಾಶ್ ಕೆ.ಇ., ರೈಲಾ ಸಂಯೋಜಕ ಶ್ರೀಧರ್ ಆಚಾರ್ಯ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.