ಪುತ್ತೂರು: ಸಹಜ್ ರೈ ಬಳೆಜ್ಜ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಕಾರ್ಯಕ್ರಮದ ಹುಲಿಕುಣಿತ ವೇಷ ಸ್ಪರ್ಧೆಯ ಫಲಿತಾಂಶದ ವಿವರ ಹೀಗಿದೆ
ದ.ಕ.ಜಿಲ್ಲೆಯ ಆಯ್ದ 8 ಹುಲಿವೇಷ ಕುಣಿತ ತಂಡಗಳಿಂದ ಪ್ರದರ್ಶನ ನೀಡಿತು. ಕದ್ರಿ ನವನೀತ್ ಶೆಟ್ಟಿ, ರೋಹನ್ ತೊಕ್ಕೊಟ್ಟು, ಗಿರೀಶ್ ನಾರಾಯಣ್, ಸತೀಶ್ ತಿಂಗಳಾಯ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಹುಲಿವೇಷ ಕುಣಿತವೂ ಜನರ ಮನಸೋರೆಗೊಳಿಸಿದ್ದು ಸ್ಪರ್ಧೆಯಲ್ಲಿ ವೈಯುಕ್ತಿಕ, ಸಮೂಹ,ಓವರ್ ಆಲ್ ಎಂದು ಮೂರು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಯಿತು.
ಪ್ರಶಸ್ತಿಗಳ ವಿವರ
ಪುತ್ತೂರ್ದ ಪಿಲಿ-
ಪುತ್ತೂರ್ದ ಪಿಲಿ ಪ್ರಶಸ್ತಿಯನ್ನು ಕಲ್ಲೇಗ ಟೈಗರ್ಸ್ ಪುತ್ತೂರಿನ ಯತಿನ್ ಪಡೆದುಕೊಂಡರು.
ವೈಯಕ್ತಿಕ ಬಹುಮಾನದಲ್ಲಿ
ಪಂದ್ಯ ಶ್ರೇಷ್ಠ ಪಿಟ್ಟಿ ಹುಲಿ-
ಪಂದ್ಯ ಶ್ರೇಷ್ಠ ಪಿಟ್ಟಿ ಹುಲಿ ಪ್ರಶಸ್ತಿಯನ್ನು ಎಮ್ ಎಫ್ ಸಿ ಮುಳಿಹಿತ್ಲು, ಮುಳಿಹಿತ್ಲು ಪ್ರೇಂಡ್ಸ್ ಸರ್ಕಲ್ ನ ಶೌರ್ಯ ಪಡೆದುಕೊಂಡರು.
ಪಂದ್ಯ ಶ್ರೇಷ್ಠ ಕಪ್ಪು ಹುಲಿ
ಪಂದ್ಯ ಶ್ರೇಷ್ಠ ಕಪ್ಪು ಹುಲಿ ಪ್ರಶಸ್ತಿಯನ್ನು ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಕೋಡಿಕಲ್ ತಂಡದ ಅಕ್ಷತ್ ಉಡುಪಿ ಪಡೆದರು.
ಮುಡಿ ಹೊಡೆದ ಪಿಲಿ ವೀರ
ಮುಡಿ ಹೊಡೆದ ಪಿಲಿ ವೀರ ಪ್ರಶಸ್ತಿಯನ್ನು ಮುರಳಿ ಬ್ರದರ್ಸ್ ಟೈಗರ್ಸ್ ಟ್ರೂಪ್ ಪುತ್ತೂರು ತಂಡದ ಧನುಷ್ ಕೈಕಂಬ ಪಡೆದರು.
ನಾಣ್ಯ ಗೆದ್ದ ಪ್ರವೀಣ ಹುಲಿ
ನಾಣ್ಯ ಗೆದ್ದ ಪ್ರವೀಣ ಹುಲಿ ಪ್ರಶಸ್ತಿಯನ್ನು ಮಂಗಳೂರು ಫ್ರೇಂಡ್ಸ್ ಟೈಗರ್ಸ್ ಮುಳಿಹಿತ್ಲು ತಂಡದ ಲಕೀಶ್ ಪಡೆದುಕೊಂಡರು.
ತಾಯಿ ಹುಲಿ
ತಾಯಿ ಹುಲಿ ಪ್ರಶಸ್ತಿಯನ್ನು ಸ್ವಾಮಿ ಕೊರಗಜ್ಜ ಭಕ್ತವೃಂದ ಕುಂಪಲ ತಂಡದ ರಂಜಿತ್ ಪಡೆದುಕೊಂಡರು.
ತಂಡದ ವಿಶೇಷ ಬಹುಮಾನ ವಿಜೇತರ ಪಟ್ಟಿ
ಉತ್ತಮ ತಾಸೆ ಬಳಗ
ಕ್ರಮಸಂಖ್ಯೆ 7ರ ಕಲ್ಲೇಗ ಟೈಗರ್ಸ್ ಪುತ್ತೂರು ಪಡೆದುಕೊಂಡಿತು.
ಉತ್ತಮ ಬಣ್ಣಗಾರಿಕೆ,ದರಣಿ ಮಂಡಲ, ಪ್ರವೇಶ- ನಿರ್ಗಮನ:
ಉತ್ತಮ ಬಣ್ಣಗಾರಿಕೆ,ದರಣಿ ಮಂಡಲ, ಪ್ರವೇಶ- ನಿರ್ಗಮನ ಪ್ರಶಸ್ತಿಯನ್ನು ಕ್ರಮ ಸಂಖ್ಯೆ 4 ರ ಮುರಳೀ ಬ್ರದರ್ಸ್ ಟೈಗರ್ಸ್ ಪುತ್ತೂರು ತಂಡ ಪಡೆದುಕೊಂಡಿತು.
ಶಿಸ್ತಿನ ತಂಡ ಬಹುಮಾನ
ಶಿಸ್ತಿನ ತಂಡ ಬಹುಮಾನ ಪ್ರಶಸ್ತಿಯನ್ನು ಕ್ರಮ ಸಂಖ್ಯೆ 1 ರ ಶ್ರೀ ದುರ್ಗಾ ಹುಲಿ ಮಂಜೇಶ್ವರ ತಂಡ ಪಡೆದುಕೊಂಡಿತು.
ಓವರ್ ಆಲ್ ತಂಡ ಪ್ರಶಸ್ತಿ
ಪ್ರಥಮ ಬಹುಮಾನವನ್ನು ಎಮ್ ಎಫ್ ಸಿ ಮುಳಿಹಿತ್ಲು, ಮುಳಿಹಿತ್ಲು ಪ್ರೇಂಡ್ಸ್ ಸರ್ಕಲ್ ತಂಡ 3ಲಕ್ಷ ಬಹುಮಾನ ಮೊತ್ತವನ್ನು ಪಡೆದುಕೊಂಡು ಸತತವಾಗಿ ಪುತ್ತೂರು ಪಿಲಿಗೊಬ್ಬು ಸ್ಪರ್ಧೆಯಲ್ಲಿ 2 ಬಾರಿ ಬಹುಮಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಯಿತು.
ದ್ವಿತೀಯ ಬಹುಮಾನವನ್ನು ಎಸ್ ಕೆ ಬಿ ಟೈಗರ್ಸ್ ಕುಂಪಲ(ಸ್ವಾಮಿ ಕೊರಗಜ್ಜ ಭಕ್ತವೃಂದ ಕುಂಪಲ) ತಂಡ ಪಡೆದು 2 ಲಕ್ಷ ಬಹುಮಾನ ಮೊತ್ತ ತನ್ನದಾಗಿಸಿಕೊಂಡಿತು.
ತೃತೀಯ ಬಹುಮಾನವನ್ನು ಮಹಕಾಳಿ ಟೈಗರ್ಸ್ ತುಮಿನಾಡು ತಂಡ ಪಡೆದು 1ಲಕ್ಷ ಮೊತ್ತ ತನ್ನದಾಗಿಸಿಕೊಂಡಿತು.