ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ.ಕ, ಕಾಸರಗೋಡು, ಕೊಡಗು ಜಿಲ್ಲಾ ಅಂತರ್-ಕಾಲೇಜು ಪದವಿ ಪೂರ್ವ(ಪಿಯು) ಕಾಲೇಜುಗಳ ಫೆಸ್ಟ್-ಅಟೆರ್ನಸ್ 2024 ಅಕ್ಷಯ ಕಾಲೇಜಿನಲ್ಲಿ ನ.16 ರಂದು ಉದ್ಘಾಟನೆಗೊಂಡಿತು. ಅಕ್ಷಯ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿಯೋರ್ವ ವಿದ್ಯಾರ್ಥಿಯು ಬೇರೆ ಬೇರೆ ಪ್ರತಿಭೆಯನ್ನು ಹೊಂದಿದ್ದು, ಇಂತಹ ಪ್ರತಿಭಾಸಕ್ತ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಅಕ್ಷಯ ಕಾಲೇಜು ವೇದಿಕೆಯನ್ನು ನಿರ್ಮಿಸಿ ಕೊಡುತ್ತಿದೆ ಎಂದರು.
ಟ್ರೋಫಿ ಅನಾವರಣ:
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಫೆಸ್ಟ್ ಕಾರ್ಯಕ್ರಮದ ಪ್ರಥಮ, ದ್ವಿತೀಯ, ತೃತೀಯ ಹಾಗೂ ಆಕರ್ಷಕ ಬಹುಮಾನಗಳ ಟ್ರೋಫಿಗಳನ್ನು ವಿದ್ಯಾರ್ಥಿಗಳು ವೇದಿಕೆಯಲ್ಲಿ ಅನಾವರಣಗೊಳಿಸಿದರು.
ವೇದಿಕೆಯಲ್ಲಿ ಕಾಲೇಜು ಚೇರ್ಮನ್ ಜಯಂತ್ ನಡುಬೈಲು, ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಉಪ ಪ್ರಾಂಶುಪಾಲ ರಕ್ಷಣ್ ಟಿ.ಆರ್, ಕಾರ್ಯಕ್ರಮ ಸಂಯೋಜಕ ರಾಕೇಶ್ ಕೆ, ವಿದ್ಯಾರ್ಥಿ ಸಂಘದ ನಾಯಕ ಜೀವನ್ ಉಪಸ್ಥಿತರಿದ್ದರು. ಪ್ರಕೃತಿ ಪ್ರಾರ್ಥಿಸಿದರು. ಅಂಚಿತ್ ನಡುಬೈಲು ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.