ಹೊಲದಲ್ಲಿ ಆಟವಾಡಲು ತೆರಳಿದ ಮಕ್ಕಳ ಮೈಮೇಲೆ ಬೃಹತ್ ಗಾತ್ರದ ಕಲ್ಲು ಬಂಡೆ ಬಿದ್ದು ಒಂದೇ ಮನೆಯ ಅಣ್ಣ-ತಂಗಿ ಮತ್ತು ಯುವಕ ಮೃತಪಟ್ಟ ಧಾರುಣ ಘಟನೆ ಜಿಲ್ಲೆಯ ಹಟ್ಟಿ ಸಮೀಪದ ಗೌಡೂರು ತಾಂಡಾದಲ್ಲಿ ನಡೆದಿದೆ.
ಮಂಜುನಾಥ ಮಾನಪ್ಪ(9), ವೈಶಾಲಿ ಮಾನಪ್ಪ(7) ಅಣ್ಣ- ತಂಗಿಯಾದರೆ, ಮತ್ತೋರ್ವ ಯುವಕ ರಘು ಸಾವನ್ನಪ್ಪಿದವರು.
ಶಾಲೆ ರಜೆ ಇರುವ ಹಿನ್ನೆಲೆಯಲ್ಲಿ ಪೋಷಕರ ಜೊತೆಗೆ ಮಕ್ಕಳು ಜಮೀನಿಗೆ ಹೋಗಿದ್ದರು. ಜಮೀನು ಬದಿಯಲ್ಲಿ ಹಾಕಿದ ಕಲ್ಲು ಬಂಡೆಗಳ ಸುತ್ತಮುತ್ತ ಆಟವಾಡುತ್ತಿದ್ದರು. ಈ ವೇಳೆ ಕಲ್ಲು ಬಡೆ ಜಾರಿ ಬಿದ್ದಿದೆ.