ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಆಶ್ರಯದಲ್ಲಿ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ಸಾಜಾ ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಭಟ್ ನೆರವೇರಿಸಿದರು.
ಅತಿಥಿಗಳಾಗಿ ಕಿರಣ್ ಕುಮಾರ್ ರೈ, ಶಾಲಾ ಮುಖ್ಯ ಉಪಾಧ್ಯಾಯ ಶಶಿಕಾಂತ್ ಅವರು ಪರಿಸರದ ಕಾಳಜಿ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಲ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷ ರವಿಚಂದ್ರ ಸಾಜ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಧಾಕರ ನಾಯಕ್, ಶೌರ್ಯ ಕಾರ್ಯಕ್ರಮದ ಪ್ರತಿನಿಧಿಯಾದ ವಿನಯ್ ನಾಯ್ಕ, ಕೃಷಿ ಮೇಲ್ವಿಚಾರಕರಾದ ಶಿವ ರಂಜನ್, ಮೇಲ್ವಿಚಾರಕರಾದ ಪ್ರಶಾಂತ್ ಭಾಗವಹಿಸಿದ್ದರು.
ಸೇವಾ ಪ್ರತಿನಿಧಿ ಆಶಾಲತಾ ಸ್ವಾಗತಿಸಿ, ಜಗದೀಶ್ ಗೌಡ ವಂದಿಸಿದರು. ಬಾಲಕೃಷ್ಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶೌರ್ಯದ ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು