ಬೆಂಗಳೂರು: ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆಯು ಕೇರಳದಲ್ಲಿ ತಯಾರಿಸಿ, ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ 90 ಬಗೆಯ ಕುರುಕಲು ತಿಂಡಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 31 ಮಾದರಿಗಳು ಸೇವಿಸಲು ಅಸುರಕ್ಷಿತ ಎನ್ನುವುದು ದೃಢವಾಗಿದೆ.
ಅವುಗಳಲ್ಲಿ ಸುಮಾರು 31 ಮಾದರಿಗಳು ಅಸುರಕ್ಷಿತ ಎನ್ನುವುದು ದೃಢವಾಗಿದೆ. ಇದರಲ್ಲಿ ಸನ್ಸೆಟ್ ಯೆಲ್ಲೋ, ಅಲ್ಲೂರ ರೆಡ್, ಅಜೋರುಬಿನ್, ಟಾಟ್ರಾÌಜಿನ್ ಮತ್ತಿತರ ಕೃತಕ ಬಣ್ಣಗಳನ್ನು ಬಳಸಿರುವುದು ದೃಢವಾಗಿದೆ.
ಇತರ ಜಿಲ್ಲೆಗಳಿಗೂ ಸರಬರಾಜು ಶಂಕೆ
ಕೊಡಗು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಸೇರಿ ಇತರ ಜಿಲ್ಲೆಗಳಿಗೂ ಕೇರಳದ ಈ ಚಿಪ್ಸ್ ಹಾಗೂ ಇತರ ಕುರುಕಲು ತಿಂಡಿ ಸರಬರಾಜು ಆಗುತ್ತಿದೆ. ಇವುಗಳ ಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರಸ್ತುತ ಅಸುರಕ್ಷಿತ ಮಾದರಿಗಳಲ್ಲಿ ಪತ್ತೆಯಾದ ಅಲ್ಲೂರ ರೆಡ್ ರಾಸಾಯನಿಕ ಅಂಶ ಮನುಷ್ಯನ ದೇಹ ಸೇರಿದರೆ ಅಲ್ಸರೇಟಿವ್ ಕೊಲೈಟಿಸ್ ಮತ್ತು ಕ್ರಾನ್ಸ್ ನಂತಹ ಕರುಳಿನ ಉರಿಯೂತ ಕಾಯಿಲೆಗಳಿಗೆ ಕಾರಣವಾಗಲಿದೆ.